Latest

ಪತಿ ಹತ್ಯೆಗೈದು ಬ್ಯಾಗ್ ನಲ್ಲಿ ತುಂಬಿಟ್ಟ ಪತ್ನಿ; ಎಡವಟ್ಟಿನಿಂದ ಸ್ಫೋಟಗೊಂಡ ಬ್ಯಾಗ್

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಮಹಿಳೆಯೊಬ್ಬಳು ತನ್ನ ಪತಿಯನ್ನೇ ಹತ್ಯೆಗೈದು ರಾಸಾಯನಿಕ ಸಿಂಪಡಿಸಿ, ಶವವನ್ನು ಬ್ಯಾಗಿನಲ್ಲಿ ತುಂಬಿಟ್ಟ ಘಟನೆ ಬಿಹಾರದ ಮುಜಾಫರ್ ಪುರದ ಸಿಖಂದರಾಪುರದಲ್ಲಿ ಬೆಳಕಿಗೆ ಬಂದಿದೆ.

30 ವರ್ಷದ ರಾಕೇಶ್ ಹತ್ಯೆಗೀಡಾದ ವ್ಯಕ್ತಿ. ಪತ್ನಿ ರಾಧಾ, ಆಕೆಯ ಸ್ನೇಹಿತ ಸುಭಾಷ್, ಆಕೆಯ ತಂಗಿ ಹಾಗೂ ತಂಗಿಯ ಗಂಡ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

Home add -Advt

ಪತಿಯ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಗೆ ಪತಿಯೊಂದಿಗೆ ಇರಲು ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ್ದಾಳೆ. ಸಾಕ್ಷಿ ಸಿಗಬಾರದು ಎಂದು ಶವನ್ನು ಎರಡು ತುಂಡುಗಳನ್ನಾಗಿ ಮಾಡಿ ಬಳಿಕ ಅದಕ್ಕೆ ರಾಸಾಯನಿಕ ಸಿಂಪಡಿಸಿ ಮೂಟೆ ಕಟ್ಟಿದ್ದಾಳೆ. ಮನೆಯನ್ನೆಲ್ಲ ಕ್ಲೀನ್ ಮಾಡಿ ಒಂದು ಬ್ಯಾಗ್ ನಲ್ಲಿ ಶವವನ್ನಿಟ್ಟು ಬ್ಯಾಡಿಗೆ ಮನೆಯ ರೂಮಿನಲ್ಲಿಟ್ಟಿದ್ದಳು. ಈ ಕೃತ್ಯಕ್ಕೆ ರಾಧಾಳ ತಂಗಿ ಹಾಗೂ ಆಕೆಯ ಪತಿ ಸಹಾಯ ಮಾಡಿದ್ದರು ಎನ್ನಲಾಗಿದೆ.

ಆದರೆ ಶವಕ್ಕೆ ಸಿಂಪಡಿಸಿದ್ದ ರಾಸಾಯನಿಕದಿಂದಾಗಿ ಶವ ತುಂಬಿದ್ದ ಬ್ಯಾಗ್ ಸ್ಫೋಟಗೊಂಡಿದೆ. ಸ್ಫೋಟದ ಶಬ್ದಕ್ಕೆ ಹೆದರಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯನ್ನು ಪರಿಶೀಲಿಸಿದ ಪೊಲೀಸರಿಗೆ ತುಂಡಾಗಿ ಬಿದ್ದಿರುವ ಶವ ಪತ್ತೆಯಾಗಿದೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಪತ್ನಿಯೇ ಪತಿಯನ್ನು ಹತ್ಯೆಗೈದ ವಿಚಾರ ಬಯಲಾಗಿದೆ.

ಕೊಲೆಯಾದ ರಾಕೇಶ್ ಬಿಹಾರದಲ್ಲಿ ಲಿಕ್ಕರ್ ಶಾಪ್ ಗೆ ನಿಷೇಧವಿದ್ದರೂ ಲಿಕ್ಕರ್ ಬ್ಯುಸಿನೆಸ್ ನಡೆಸುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಪತ್ನಿಯೊಂದಿಗೆ ಯಾರಿಗೂ ಗೊತ್ತಾಗದಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತ ತನ್ನ ಬ್ಯುಸಿನೆಸ್ ಸಲುವಾಗಿ ಬೇರೆ ರಾಜ್ಯಗಳಿಗೆ ಓಡಾಡುತ್ತಿದ್ದ ಆಗ ತನ್ನ ಸ್ನೇಹಿತ ಸುಭಾಷ್ ನಿಗೆ ಮನೆ ಕಡೆ ನೋಡಿಕೊಳ್ಳುವಂತೆ ಹೇಳುತ್ತಿದ್ದ. ಇದರಿಂದಾಗಿ ರಾಕೇಶನ ಪತ್ನಿ ರಾಧಾ ಜೊತೆ ಸ್ನೇಹ ಸಲುಗೆ ಬೆಳೆಸಿಕೊಂಡಿದ್ದ ಸುಭಾಷ್. ಕ್ರಮೇಣವಾಗಿ ರಾಧಾ ತನ್ನ ಪತಿಯೊಂದಿಗೆ ಆಸಕ್ತಿ ಕಳೆದುಕೊಂಡು, ಸುಭಾಷ್ ಜೊತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.

Related Articles

Back to top button