Kannada NewsKarnataka News

ಸವದಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಕದಿಯುತ್ತಿದ್ದವ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಅಥಣಿ :  ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ  ಮಾಲಿಕತ್ವದ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಕಳ್ಳತನ ಮಾಡುತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿಯ ಖಾಸಗಿ ಕಂಪನಿಯ ವಾಹನ ಸಂಖ್ಯೆ ಏಂ 22 ಅ 327 ಟ್ಯಾಂಕರ್ ನಲ್ಲಿ ಅಥಣಿ ಸತ್ತಿ ರೋಡನಲ್ಲಿರುವ ಚಿದಾನಂದ ಸವದಿ ಮಾಲಿಕತ್ವದ ಪಂಪಗೆ ಭಾರತ ಪೆಟ್ರೋಲಿಯಂ ನಿಂದ ಬಂದ ಪೆಟ್ರೋಲನ್ನು ಇಳಿಸುವ ವೇಳೆ ಚಾಲಕ ತನ್ನ ಹಿಂದಿನ ಸಿಟಿನಲ್ಲಿ 35 ಲೀಟರಿನ 3 ಪ್ಲಾಸ್ಟಿಕ್ ಕ್ಯಾನ್ ಗಳನ್ನು ಇಟ್ಟುಕೊಂಡು ಟ್ಯಾಂಕರಿಗೆ ಹೋಲ್ ಮಾಡಿ ಪೈಪ್ ಮೂಲಕ ತುಂಬಿಸಿ ಕೊಳ್ಳುತ್ತಿದ್ದ.
ಅವನ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸಿದ ಪಂಪಿನ ಸಿಬ್ಬಂದಿ ಪರಿಶೀಲಿಸಲಾಗಿ ಸಿಕ್ಕಿ ಬಿದ್ದಿದ್ದಾನೆ. ತಪ್ಪು ಒಪ್ಪಿಕೊಂಡ ಚಾಲಕ ಹಲವು ದಿನಗಳಿಂದ ಕಳ್ಳತನ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.
ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button