Latest

ಕ್ರೆಡೈ ನೂತನ ಅಧ್ಯಕ್ಷರಾಗಿ ರಾಜೇಶ್ ಹೆಡಾ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಿಲ್ಡರ್ಸ್ ಮತ್ತು ಡೆವಲಪರ್ಸ್ ಅಸೋಸಿಯೇಶನ್ -ಕ್ರೆಡೈ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ರಾಜೇಶ ಹೆಡಾ ಆಯ್ಕೆಯಾಗಿದ್ದಾರೆ.
ಇದೇ 13ರಂದು ಮ್ಯಾರಿಯೆಟ್ ಹೊಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜೇಶ ಹೆಡಾ ಮತ್ತು ಅವರ ತಂಡ 2019-2021ನೇ ಸಾಲಿನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುವರು.  ನಿಕಟಪೂರ್ವ ಅಧ್ಯಕ್ಷ ಕೈಸ್ ನೂರಾನಿ ಅಧಿಕಾರ ಹಸ್ತಾಂತರಿಸುವರು.
ಹರ್ಷದ್ ಕಲಘಟಗಿ ಉಪಾಧ್ಯಕ್ಷರಾಗಿ, ಪಿ.ಎಸ್.ಹಿರೇಮಠ ಪ್ರೆಸಿಡೆಂಟ್ ಎಲೆಕ್ಟ್ ಆಗಿ,  ವಿಜಯ ಭಂಡಾರಿ ಕಾರ್ಯದರ್ಶಿಯಾಗಿ, ದೀಪಕ್ ಗೋಜಗೇಕರ್ ಖಜಾಂಚಿಯಾಗಿ, ಅಭಿಜಿತ್ ಶಿವಯೋಗಿಮಠ ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವರು.
ಸಂತೋಷ ಜವಳಕರ್, ಗೋಪಾಲರಾವ್ ಕುಕಡೋಳಕರ್, ಅಭಿಜಿತ್ ಜವಳಕರ್ ನಿರ್ದೇಶಕರಾಗಿ, ವಿಜಯ ಪಾಟೀಲ, ಚೈತನ್ಯ ಕುಲಕರ್ಣಿ ಹಾಗೂ ರಾಜೇಂದ್ರ ಮುತಗೇಕರ್, ಆನಂದ ತುಡವೇಕರ್ ಸಲಹಾ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
 ಕ್ರೆಡೈ ಕರ್ನಾಟಕ ಅಧ್ಯಕ್ಷ ಆಸ್ಟಿನ್ ರೋಚ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಐಎಂಇಆರ್ ಚೇರಮನ್ ರಾಜೇಂದ್ರ ಬೆಳಗಾಂವ್ಕರ್ ಹಾಗೂ ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು. 

ಮಹಿಳಾ ಘಟಕ:

ಇದೇ ವೇಳೆ ಕ್ರೆಡೈ ಮಹಿಳಾ ಘಟಕವನ್ನು ಕೂಡ ಮೊದಲ ಬಾರಿ ಆರಂಭಿಸಲಾಗುತ್ತಿದೆ. ದೀಪಾ ಭಂಡಾರಿ ಸಂಚಾಲಕರಾಗಿ ಮತ್ತು ತೇಜಸಾ ಕಲಘಟಗಿ ಸಹ ಸಂಚಾಲಕರಾಗಿ ಅಧಿಕಾರ ವಹಿಸಿಕೊಳ್ಳುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button