Latest

ಮೀನು ಹಿಡಿಯಲು ಹೋದ ಬಾಲಕ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೀನು ಹಿಡಿಯಲು ಹೋಗಿದ್ದ 9 ವರ್ಷದ ಬಾಲಕ ಕ್ವಾರಿಯಲ್ಲಿ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಕೂಡ್ಲು ಗ್ರಾಮದಲ್ಲಿ ನಡೆದಿದೆ.

ನೇಪಾಳ ಮೂಲದ ದಂಪತಿಯ ಪುತ್ರ ವಿಷ್ಣು ಮೃತ ಬಾಲಕ. ಕೆಲಸ ಅರಸಿ ನೇಪಾಳದಿಂದ ಆಗಮಿಸಿದ್ದ ಕುಟುಂಬ ಕೂಡ್ಲು ಸಮೀಪ ಸಿಂಗಸಂದ್ರದಲ್ಲಿ ನೆಲೆಸಿತ್ತು. ಸಹೋದರನ ಜತೆ ಮೀನು ಹಿಡಿಯಲೆಂದು ಬಾಲಕ ತೆರಳಿದ್ದ. ಈ ವೇಳೆ ಕ್ವಾರಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಸಹೋದರ ತಕ್ಷಣ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಹಲವು ಸಮಯಗಳ ಕಾಲ ಕಾರ್ಯಾಚರಣೆ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ.

Home add -Advt

ಇದೀಗ ಬಾಲಕನ ಮೃತದೇಹ ಪತ್ತೆಯಾಗಿದ್ದು, ಮೇಲಕೆತ್ತಲಾಗಿದೆ. ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 703 ಜನ ಬಲಿ

Related Articles

Back to top button