ತೋಟದ ಮನೆಗೆ ನುಗ್ಗಿ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ನಗದು-ಚಿನ್ನ ದೋಚಿ ಪರಾರಿಯಾದ ಖದೀಮರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿನಿಮೀಯ ರೀತಿಯಲ್ಲಿ ತೋಟದ ಮನೆಗೆ ನುಗ್ಗಿದ 8-10 ಜನರಿದ್ದ ಕಳ್ಳರ ಗ್ಯಾಂಗ್ ಮನೆಯವರನ್ನು ಕಟ್ಟಿ ಹಾಕಿ, ಚಾಕು ಹಿಡಿದು ಬೆದರಿಸಿ ಲಕ್ಷಾಂತರ ರೂಪಾಯಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಸಂಕೇಶ್ವರದ ಬಳಿ ನಡೆದಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಆಗಮಿಸಿದ ಡಕಾಯಿತರ ಗುಂಪು ನಗರದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ರಾಮ ಕಿಲ್ಲೇದಾರ ಮನೆಯ ಬೀಗ ಮುರಿದು ಸುಮಾರು 30 ಗ್ರಾಂ ಚಿನಾಭರಣ ಹಾಗೂ ಅವರ ಸಂಬಂಧಿಕರ ಮನೆಗೆ ನುಗ್ಗಿ ಅಲ್ಲಿದ್ದವರನ್ನು ಕಟ್ಟಿ ಹಾಕಿ, ಓರ್ವನ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಮನೆಯಲ್ಲಿದ್ದ 110 ಗ್ರಾಂ ಚಿನ್ನಾಭರಣ, 75 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದಂತೆ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಂತೆ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲಾ ಪೊಲೀಸ್ ವರಿಷ್ಥಾಧಿಕಾರಿ ಮಹಾಲಿಂಗ ನಂದಗಾವಿ, ಗೋಕಾಕ್ ಡಿಎಸ್ ಪಿ ಮನೋಜಕುಮಾರ ನಾಯಕ, ಸಂಕೇಶ್ವರ ಸಿಪಿಐ ಚನ್ನಗಿರ್, ಪಿಎಸ್ ಐ ಗಣಪತಿ ಕಂಗನೋಳಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ವಿಶೇಷ ತಂದ ರಚಿಸಿ ಶೋಧ ಕಾರ್ಯ ನಡೆಸಲಾಗಿದೆ.
ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅಪರಾಧಿ




