Kannada NewsKarnataka News

KUWJ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ದಿಲೀಪ್ ಕುರಂದವಾಡೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)ದ ಬೆಳಗಾವಿ ಘಟಕದ ಜಿಲ್ಲಾಧ್ಯಕ್ಷರಾಗಿ ದಿಲೀಪ ಕುರುಂದವಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಳಿದ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘಸ ಗೌರವ ಅಧ್ಯಕ್ಷರಾಗಿ ಭೀಮಶಿ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ.  ಜಿಲ್ಲಾ ಕಾರ್ಯಕಾರಿಣಿ ಸದಸ್ಯರ 15  ಸ್ಥಾನಕ್ಕಾಗಿ 16 ಜನ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಇಂದು ಶನಿವಾರ ಮಧ್ಯಾಹ್ನ 1ಗಂಟೆಯವರೆಗೆ ಅವಕಾಶವಿತ್ತು  ಇಂದು ಬೆಳಗ್ಗೆ ಓರ್ವರು ನಾಮಪತ್ರ ವಾಪಸ್ ಪಡೆದಿರುವ ಹಿನ್ನಲೆಯಲ್ಲಿ  ಕಾರ್ಯಕಾರಿಣಿ ಸಮೀತಿಯ 15 ಜನ ಸದಸ್ಯರು ಸೇರಿದಂತೆ ಉಳಿದ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  ಉಪಾಧ್ಯಕ್ಷರಾಗಿ ಇನ್ ಬೆಳಗಾವಿ  ಸಂಪಾದಕ ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ,  ಶ್ರೀಶೈಲ ಮಠದ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ ಸಿ.ಪಾಟೀಲ, ಕಾರ್ಯದರ್ಶಿಯಾಗಿ ಶ್ರೀಕಾಂತ ಕುಬಕಡ್ಡಿ, ಈಶ್ವರ ಹೋಟಿ,  ತಾನಾಜಿರಾವ್ ಮುರಂಕರ , ಹಾಗೂ ಖಜಾಂಚಿಯಾಗಿ ಚೇತನ ಹೊಳೆಪ್ಪಗೊಳ ಅವರು ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನ ಗೊಂದಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಹೊಂಗಲ, ಸಂಜೀವಕುಮಾರ ತಿಲಗರ, ಸುನೀಲ ಗಾವಡೆ, ಸುರೇಶ ಬಾಳೋಜಿ, ರಾಜೇಂದ್ರ ಕೋಳಿ, ರವಿ ಹುಲಕುಂದ, ಸುಕುಮಾರ ಬನ್ನೂರೆ, ಸಿದ್ದಲಿಂಗಯ್ಯ ಪೂಜೇರ, ಸೂರ್ಯಕಾಂತ ಪಾಟೀಲ, ರಾಜಕುಮಾರ ಬಾಗಲಕೋಟ, ಈರನಗೌಡ ಪಾಟೀಲ, ವಿಕ್ರಮ ಪೂಜೇರಿ, ಭೀಮಪ್ಪ ಕಿಚಡಿ, ಲೀನಾ ಟೋಪಣ್ಣವರ, ಈರಣ್ಣ ಬುಡ್ಡಾಗೋಳ ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ,  ಜಿ.ಕೆ ಪೂಜಾರ  ಕಾರ್ಯನಿರ್ವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button