Latest

ರಷ್ಯಾ ಭೀಕರ ದಾಳಿ; ಖ್ಯಾತ ನಟ ಬಲಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ರಷ್ಯಾ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ದಾಳಿಯಲ್ಲಿ ಉಕ್ರೇನ್ ನ 202 ಶಾಲೆಗಳು, 34 ಆಸ್ಪತ್ರೆಗಳು, 1500 ಜನವಸತಿ ಕಟ್ಟಡಗಳು ಸಂಪೂರ್ಣ ಧ್ವಂಸಗೊಂಡಿದ್ದು, ಸಾವಿರಾರು ಜನರು ಮೃತಪಟ್ಟಿದ್ದಾರೆ.

ಈ ನಡುವೆ ರಷ್ಯಾ ದಾಳಿಯಲ್ಲಿ ಉಕ್ರೇನ್ ನ ಖ್ಯಾತ ನಟ 33 ವರ್ಷದ ಪಾಶಾ ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪಾಶಾ ಲಿ ಇತ್ತೀಚೆಗಷ್ಟೇ ತಮ್ಮ ನಟನೆ ಬಿಟ್ಟು ದೇಶ ರಕ್ಷಣೆಗಾಗಿ ಪ್ರಾದೇಶಿಕ ಸೇನೆಗೆ ಸೇರ್ಪಡೆಯಾಗಿದ್ದರು. ಆದರೆ ಉಕ್ರೇನ್ ನ ಇರ್ಪಿನ್ ನಗರದ ಮೇಲೆ ನಡೆದ ದಾಳಿಯಲ್ಲಿ ಲಿ ಸಾವನ್ನಪ್ಪಿದ್ದಾರೆ.

ಈ ನಡುವೆ ತಡ ರಾತ್ರಿಯಿಂದ ಉಕ್ರೇನ್ ನ ಸುಮಿ ನಗರದಲ್ಲಿ ರಷ್ಯಾ ನಿರಂತರ ಬಾಂಬ್ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಸೇರಿ 18 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ರಷ್ಯಾ ಸೇನೆ ಕೀವ್, ಖಾರ್ಕೀವ್, ಚೆರ್ನಿಹೀವ್, ಮರಿಯಪೋಲ್, ಸುಮಿ ನಗರ ಸೇರಿದಂತೆ 5 ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ.

ಭಾರತೀಯ ಸೇನೆಯಲ್ಲಿ ಸಿಗದ ಅವಕಾಶ; ಉಕ್ರೇನ್ ಆರ್ಮಿ ಸೇರಿದ ತಮಿಳುನಾಡು ವಿದ್ಯಾರ್ಥಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button