Latest

ಬೆಂಗಳೂರು ಮೂಲದ ಉದ್ಯಮಿಗೆ ಐಶಾರಾಮಿ ಕಾರು ಮಾರಿದ ಪ್ರಿಯಾಂಕಾ ಚೋಪ್ರಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಾರನ್ನು ಬೆಂಗಳೂರಿನ ಉದ್ಯಮಿಯೊಬ್ಬರು ಖರೀದಿಸಿರುವುದು ಸುದ್ದಿಗೆ ಗ್ರಾಸವಾಗಿದೆ.

ಪ್ರಿಯಾಂಕಾ ಚೋಪ್ರಾ ತಮ್ಮ ಬಳಿ ಇದ್ದ 8 ಕೋಟಿ ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆದರೆ ಈ ಕಾರನ್ನು ಖರೀದಿಸಿದ ಉದ್ಯಮಿ ಹೆಸರನ್ನು ಬಹಿರಂಗಪಡಿಸಿಲ್ಲ.

ಅಷ್ಟಕ್ಕೂ ಪ್ರಿಯಾಂಕ ತಮ್ಮ ಐಷಾರಾಮಿ ಕಾರು ಮಾರಲು ಕಾರಣ, ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಪ್ರಿಯಾಂಕಾ ಭಾರತದಲ್ಲಿಯೇ ಖರೀದಿಸಿದ್ದರು. ವಿವಾಹದ ಬಳಿಕ ಪ್ರಿಯಾಂಕ ತಮ್ಮ ಪತಿ ನಿಕ್ ಜೋನಸ್ ಜತೆ ಅಮೆರಿಕಾದಲ್ಲಿ ಸೆಟಲ್ ಆಗಿರುವುದರಿಂದ ಈ ಕಾರು ಉಪಯೋಗಿಸುತ್ತಿರಲಿಲ್ಲ. ಅವರ ತಾಯಿ ಮಧು ಚೋಪ್ರಾ ಕೂಡ ಈ ಕಾರನ್ನು ಬಳಸುತ್ತಿರಲಿಲ್ಲ. ಹಾಗಾಗಿ ಕಾರನ್ನು ಮಾರಾಟ ಮಾಡುವುದು ಸೂಕ್ತ ಎಂದು ನಿರ್ಧರಿಸಿ ಉದ್ಯಮಿಯೊಬ್ಬರಿಗೆ ಕಾರನ್ನು ಮಾರಾಟ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button