Kannada NewsLatest

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಬಿಚ್ಚಿಟ್ಟ ಹೆಚ್.ವಿಶ್ವನಾಥ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪಲು ಕಾಣುವ ಕೈಗಳೇ ಕಾರಣ ಹೊರತು ಬೇರಾರೂ ಅಲ್ಲ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದವರೆ ರಮೆಶ್ ಜಾರಕಿಹೊಳಿ. ಆದರೆ ಅವರಿಗೆ ಸಚಿವ ಸ್ಥಾನ ನೀಡದೇ ಹೀಗೆ ಆಟ ಆಡಿಸ್ತಾ ಕುಳಿತರೆ ಹೇಗೆ? ಎಂದು ಪ್ರಶ್ನಿಸಿದರು.

Home add -Advt

ಅಧಿಕಾರ ಎಲ್ಲವೂ ತಾತ್ಕಾಲಿಕ. ನಿಮಗೆ ಅಧಿಕಾರ ಕೊಟ್ಟವರೆ ನಾವು. ನಾವು ಕೊಟ್ಟ ತ್ರಿಶೂಲದಿಂದಲೆ ನಮ್ಮನ್ನು ತಿವಿಯುತ್ತಿದ್ದೀರಿ. ನಮ್ಮನ್ನು ಕಾಣುವ ಕೈಗಳೆ ಮುಗಿಸುತ್ತಿವೆ ಇದು ಮುಂದುವರೆಯಲ್ಲ ಎಂದು ಹೇಳಿದರು.

ಇದೇ ವೇಳೆ ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿದ ಅವರು, ಜಾತಿ, ಧರ್ಮದ ಆಧಾರದ ಮೇಲೆ ಯಾವತ್ತೂ ರಾಜಕೀಯ ಮಾಡಬಾರದು. ಈ ರೀತಿ ಮಾಡುವುದೇ ಅಪಯಕಾರಿ. ಈ ರೀತಿ ಒಂದು ಎರಡು ಚುನಾವಣೆ ಗೆಲ್ಲಬಹುದು ಅಷ್ಟೆ. ಮುಸ್ಲಿಂರನ್ನು ಹೊರ ಹಾಕುವಂತೆ ಬಿಜೆಪಿ ಬರೆದುಕೊಂಡಿದೆಯಾ? ಸಂವಿಧಾನದ ಅಡಿ ದೇಶ ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿಯವರು ಹಿಂದೂಗಳನ್ನು, ಕಾಂಗ್ರೆಸ್ ನವರು ಮುಸ್ಲಿಂರನ್ನು ಓಲೈಕೆ ಮಾಡುವುದು ಇದೆಲ್ಲವೂ ಇದೆ. ವಿಪಕ್ಷಕ್ಕೆ ತನ್ನದೇ ಆದ ಕಾನೂನು, ಜವಾಬ್ದಾರಿಗಳೂ ಇವೆ. ಆದರೆ ಅವರಿಗೆ ಯಾರೂ ಹೇಳುವವರು ಕೇಳುವವರಿಲ್ಲ ಎಂಬಂತಾಗಿದೆ ಎಂದು ಹೇಳಿದರು.

Related Articles

Back to top button