Latest

ಸಿಎಂ ಬೊಮ್ಮಾಯಿಗೆ ಬಯೋಕಾನ್ ಮುಖ್ಯಸ್ಥೆ ಮಾಡಿದ ಮನವಿಯೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿನ ಸಧ್ಯದ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ, ಕೋಮು ವಿವಾದದ ಬೆಳವಣಿಗೆ ತಡೆಯುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರುತು ಟ್ವೀಟ್ ಮಾಡಿರುವ ಕಿರಣ ಮಜುಮ್ದಾರ್ ಷಾ, ಕರ್ನಾಟಕ ಅಂತರಗತ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತಿದೆ. ಹೀಗಿರುವಾಗ ಕೋಮುವಾದಕ್ಕೆ ಅನುಮತಿ ನೀಡಬಾರದು. ಇದರಿಂದ ಐಟಿಬಿಟಿ ಕ್ಷೇತ್ರದಲ್ಲಿ ಕೋಮುವಾದ ಆರಂಭವಾದರೆ ಕರ್ನಾಟಕದ ಜಾಗತಿಕ ನಾಯಕತ್ವವನ್ನು ನಾಶಪಡಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Home add -Advt

ರಾಜ್ಯದಲ್ಲಿ ಧಾರ್ಮಿಕ ವಿಭಜನೆ, ಧರ್ಮ ಸಂಘರ್ಷಗಳಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ರಾಜ್ಯಲ್ಲಿ ನಡೆಯುತ್ತಿರುವ ಕೋಮುವಾದವನ್ನು ತಡೆಯುವಂತೆ ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ.

ಶ್ರೀಶೈಲಂನಲ್ಲಿ ಕನ್ನಡಿಗ ಭಕ್ತರು ಸಾವನ್ನಪ್ಪಿಲ್ಲ, ವದಂತಿಗಳನ್ನು ನಂಬಬೇಡಿ: ಕರ್ನೂಲ್ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ನೀಡಿರುವ ನಿಖರ ಮಾಹಿತಿ ಇಲ್ಲಿದೆ

 

Related Articles

Back to top button