Latest

ಬೈಕ್ ಅಪಘಾತ; SSLC ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಬೈಕ್ ನಲ್ಲಿ ತ್ರಿಬಲ್ ರೈಡ್ ಮೂಲಕ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಮದಲ್ಲಿ ನಡೆದಿದೆ.

ನವೀನ್ (16) ಹತ್ತನೇ ತರಗತಿ ಮೃತ ವಿದ್ಯಾರ್ಥಿ. ಒಂದೇ ಬೈಕ್ ನಲ್ಲಿ ಪರೀಕ್ಷೆ ಬರೆಯಲು ಮೂವರು ವಿದ್ಯಾರ್ಥಿಗಳು ಅಮೃತೂರಿಗೆ ತೆರಳುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಹೊಡೆದ ಪರಿಣಾಮ ದುರಂತ ಸಂಭವಿಸಿದೆ.

Home add -Advt

ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರು ವಿದ್ಯಾರ್ಥಿಗಳಾದ ಶರತ್ ಹಾಗೂ ದರ್ಶನ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಡಾ.ರಾಜೇಂದ್ರ ಪ್ರಸಾದ್ ಹೈಸ್ಕೂಲು ವಿದ್ಯಾರ್ಥಿಗಳು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನ ಸಮಾಧಿ ಪತ್ತೆ

Related Articles

Back to top button