Latest

ಕೆಲಸ ಸಿಕ್ಕ ಮೊದಲ ದಿನವೇ ನರ್ಸ್ ಅನುಮಾನಾಸ್ಪದ ಸಾವು; ಅತ್ಯಾಚಾರ, ಕೊಲೆ ಶಂಕೆ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಕೆಲಸ ಸಿಕ್ಕ ಖುಷಿಯಲ್ಲಿ ಮೊದಲ ದಿನ ಕೆಲಸಕ್ಕೆ ಹೋಗಿದ್ದ ನರ್ಸ್ ಓರ್ವರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದ ನ್ಯೂ ಜೀವನ್ ಆಸ್ಪತ್ರೆಯಲಿ ಬೆಳಕಿಗೆ ಬಂದಿದೆ.

ನರ್ಸಿಂಗ್ ಹೋಂ ನ ಗೋಡೆಗೆ ನರ್ಸ್ ಶವ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದೇ ಗೋಡೆಯ ಕಿಟಕಿಗೆ ಹಗ್ಗ ಕಟ್ಟಲಾಗಿದ್ದು, ನರ್ಸ್ ಶವ ಗೋಡೆಗೆ ಇಳಿಬಿಟ್ಟಂತೆ ನೇತಾಡುತ್ತಿತ್ತು. ಇದು ಅಮಹತ್ಯೆಯಲ್ಲ ಕೊಲೆ ಎಂದು ನರ್ಸ್ ಕುಟುಂಬಸ್ಥರು ಆರೋಪಿಸಿದ್ದಾರೆ.

ನಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ನರ್ಸಿಂಗ್ ಹೋಂ ಆಡಳಿತಾಧಿಕಾರಿ ಸೇರಿ ಮೂವರ ವಿರುದ್ಧ ದೂರು ನೀಡಿದ್ದಾರೆ. ಮೂವರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಎಲ್ ಪಿಜಿ ಸಿಲಿಂಡರ್ ದರ ಮತ್ತಷ್ಟು ಏರಿಕೆ

Home add -Advt

Related Articles

Back to top button