Latest

ಕಿಂಗ್ ಪಿನ್ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ; ಹೆಚ್ ಡಿಕೆ ಸ್ಫೋಟಕ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ಹಾಸನ: ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮದ ಹಿಂದೆ ದೊಡ್ಡ ದೊಡ್ಡ ಕುಳಗಳು ಇದ್ದಾರೆ. ಮೂಲ ಕಿಂಗ್ ಪಿನ್ ಟಚ್ ಮಾಡಿದರೆ ರಾಜ್ಯ ಸರ್ಕಾರವೇ ಇರುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಪಿಎಸ್ ಐ ಹುದ್ದೆ ಅಕ್ರಮದಲ್ಲಿ ಅಷ್ಟೊಂದು ಜನರನ್ನು ಬಂಧಿಸಿದ್ದಾರೆ. ಆದರೆ ಕಿಂಗ್ ಪಿನ್ ಗಳು ಬೇರೆಯೇ ಇದ್ದಾರೆ. ರಾಜ್ಯ ಸರ್ಕಾರಕ್ಕೆ ಮೂಲ ಕಿಂಗ್ ಪಿನ್ ಹೆಸರು ಹೇಳಲು ಸಾಧ್ಯವೇ? ಕಿಂಗ್ ಪಿನ್ ಹೆಸರು ಟಚ್ ಮಾಡಿದರೆ ಸರ್ಕಾರವೇ ಉರುಳುತ್ತೆ. ಹಾಗಾಗಿ ಕಿಂಗ್ ಪಿನ್ ಹೆಸರು ಹೇಳಲು ಮುಂದಾಗುತ್ತಿಲ್ಲ ಎಂದು ಹೇಳಿದರು.

ಕಿಂಗ್ ಪಿನ್ ಹೊರಗಿನವರು ಯಾರೂ ಅಲ್ಲ, ನಮ್ಮ ರಾಜ್ಯದವರೇ. ಭವಿಷ್ಯದ ನಾಯಕರುಗಳೇ ಇದ್ದಾರೆ. ಪಿಎಸ್ ಐ ಅಕ್ರಮ ಮಾತ್ರವಲ್ಲ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಇದಕ್ಕಿಂತ ದೊಡ್ಡ ಹಗರಣ ನಡೆದಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ 70-80 ಲಕ್ಷ ಡೀಲ್ ಮಾಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ಯಾರು? ಇದರ ಹಿಂದೆ ಯಾರ ಕೈವಾಡ ಇದೆ? 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದೆ ಎದರು.

ಶಿಕ್ಷಣ ಇಲಾಖೆಯಲ್ಲಿ ಹೆಬ್ಬಟ್ಟು ಒತ್ತುವವರನ್ನು ನೇಮಕ ಮಾಡಿಕೊಂಡಿದ್ದಾರೆ. ಇವರ ಕಾಟ ತಡೆಯಲಾಗದೇ ಅಧಿಕಾರಿಗಳು ರಜೆ ಮೇಲೆ ಹೋಗಿದ್ದಾರೆ. ಯಾವುದೇ ಒಂದು ಇಲಾಖೆಯಾದರೂ ಸರಿಯಾಗಿ ಇದೆಯಾ? ಒಬ್ಬೊಬ್ಬರಿಗೆ ಒಂದೊಂದು ಇಲಾಖೆ ಹಂಚಲಾಗಿದೆ. ಆರ್ ಎಸ್ ಎಸ್ ಕಪಿಮುಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಸಿಲುಕಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಿಎಸ್ ಐ ಹುದ್ದೆ ಅಕ್ರಮ; 8 ಪೊಲೀಸ್ ಸಿಬ್ಬಂದಿ ಸೇರಿ 54 ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button