Latest

ಹೆಂಡತಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಇಬ್ಬರು ಮಕ್ಕಳು, ಪತ್ನಿಯನ್ನು ಹತ್ಯೆಗೈದ ವ್ಯಕ್ತಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈನ ಪಲ್ಲವರಂನಲ್ಲಿ ನಡೆದಿದೆ.

ನಾಟಿ ಔಷಧ ಅಂಗಡಿ ಇಟ್ಟುಕೊಂಡಿದ್ದ ಪ್ರಕಾಶ್ ಎಂಬ ವ್ಯಕ್ತಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಗಾಯತ್ರಿ (39) ಹಾಗೂ 11 ವರ್ಷದ ಮಗಳು ನಿತ್ಯಶ್ರೀ ಹಾಗೂ ಮಗ ಹರಿಕೃಷ್ಣನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ಅಂಗಡಿ ನಡೆಸುವುದಕ್ಕಾಗಿ ಸಾಲ ಮಾಡಿಕೊಂಡಿದ್ದ ಪ್ರಕಾಶ್, ಸಾಲಗಾರರ ಕಾಟದಿಂದ ಬೇಸತ್ತು ಅವಮಾನ ತಾಳಲಾರದೇ ಹೆಂಡತಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಶಂಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ; ಗೋಲ್ಡ್ ಜ್ಯುವೆಲರ್ಸ್ ಮಾಲೀಕ ಅರೆಸ್ಟ್

Related Articles

Back to top button