Latest

ಪಿಎಸ್ ಐ ಅಕ್ರಮ; ಕಾನ್ಸ್ ಟೇಬಲ್ ಸೇರಿ ಮೂವರ ವಿರುದ್ಧ FIR

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.

ಪ್ರಕರಣದ ಬಗ್ಗೆ ಸಿಐಡಿ ಡಿವೈ ಎಸ್ ಪಿ ಶಿವಕುಮಾರ್ ದೂರು ನೀಡಿದ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಠಾಣೆಯಲ್ಲಿ ಕಲಾಸಿಪಾಳ್ಯ ಠಾಣೆ ಕಾನ್ಸ್ ಟೇಬಲ್ ಹರೀಶ್, ಎಫ್ ಡಿಎ ಹರ್ಷ ಹಾಗೂ ಖಾಸಗಿ ವ್ಯಕ್ತಿ ಮನೋಜ್ ಸೇರಿ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Home add -Advt

ಪಿಎಸ್ ಐ ಪರೀಕ್ಷೆಯಲ್ಲಿ ಆಯ್ಕೆಯಾಗಲು ಓಎಂಆರ್ ಶೀಟ್ ನಲ್ಲಿ ಉತ್ತರ ತುಂಬಲು ಹರೀಶ್ 50 ಲಕ್ಷ ರೂಪಾಯಿ ಹಣ ನೀಡಿದ್ದ ಎನ್ನಲಾಗಿದೆ. ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಇದೀಗ ಎಫ್ ಐ ಆರ್ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ಸಿಐಡಿ ವಶಕ್ಕೆ ಪಡೆಯಲಿದೆ.

ಗೋಕಾಕ್: ಬೀದಿ ದೀಪದ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದ ಕಿಡಿಗೇಡಿಗಳು

Related Articles

Back to top button