Latest

ರಾಜವಂಶಸ್ಥರ ಜತೆ ಪ್ರಧಾನಿ ಮೋದಿ ಉಪಹಾರ ಸೇವನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಬಳಿಕ ರಾಜವಂಶಸ್ಥರ ಜತೆಗೆ ಉಪಹಾರ ಸೇವಿಸಿದರು.

ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಸ್ವತ ಯೋಗಾಸನಗಳನ್ನು ಮಾಡುವ ಮುಲಕ ಇಡೀ ವಿಶ್ವಕ್ಕೆ ಯೋಗದ ಮಹತ್ವ ಸಂದೇಶ ಸಾರಿದರು.

Home add -Advt

ರಾಜವಂಶಸ್ಥೆ ಪ್ರಮೋದಾ ದೇವಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅರಮನೆಗೆ ತೆರಳಿ ರಾಜವಂಶಸ್ಥರ ಜತೆ ಉಪಹಾರ ಸೇವಿಸಿದರು.

ಬೆಳ್ಳಿ ಬಟ್ಟಲಿನಲ್ಲಿ ಪ್ರಧಾನಿಯವರಿಗಾಗಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್, ಮೈಸೂರು ಪಾಕ್ ಸೇರಿದಂತೆ ವಿವಿಧ ತಿಂಡಿ ತಿನಿಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ರಾಜಮನೆತನದವರೊಂದಿಗೆ ಪ್ರಧಾನಿ ಉಪಹಾರಗಳನ್ನು ಸವಿದಿದ್ದಾರೆ.

ಉಪಹಾರದ ಬಳಿಕ ಪ್ರಧಾನಿ ಮೋದಿ ಮೈಸೂರು ಏರ್ ಪೋರ್ಟ್ ಮೂಲಕ ದೆಹಲಿಗೆ ವಾಪಸ್ ಆಗಿದ್ದಾರೆ.

ಸುವರ್ಣ ವಿಧಾನಸೌಧದ ಎದುರು ಯೋಗಾ ಯೋಗ!

Related Articles

Back to top button