Latest

ಆ ರಾತ್ರಿ ನಡೆದ ಘಟನೆ….ಮತ್ತೊಂದು ಶಾಕಿಂಗ್ ಸುದ್ದಿ ಹೇಳಿದ ನಟಿ ಕುಬ್ರಾ ಸೇಠ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ಕುಬ್ರಾ ಸೇಠ್ ಮತ್ತೊಂದು ಶಾಕಿಂಗ್ ಸುದ್ದಿಯೊಂದನ್ನು ತೆರೆದಿಟ್ಟಿದ್ದಾರೆ. ತಾವು ಚಿಕ್ಕಂದಿನಲ್ಲಿಯೇ ಪರಿಚಿತ ವ್ಯಕ್ತಿಯೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂಬ ವಿಚಾರವನ್ನು ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ತಾನು ಅಚಾನಕ್ ಆಗಿ ಗರ್ಭವತಿಯಾಗಿದ್ದು, ಅಬಾರ್ಷನ್ ಮಾಡಿಸಿಕೊಂಡಿದ್ದಾಗಿಯೂ ಹೇಳಿ ಭಾರಿ ಸುದ್ದಿಯಲ್ಲಿದ್ದಾರೆ.

ತಮ್ಮ ಜೀವನದಲ್ಲಾದ ಕಹಿ ಘಟನೆಗಳನ್ನು ’ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್’ ಎಂಬ ಪುಸ್ತಕದಲ್ಲಿ ಕುಬ್ರಾ ಸೇಠ್, ಜೀವನದ ಹಲವು ಕರಾಳ ಕಥೆಗಳನ್ನು ಬರೆದಿದ್ದಾರೆ.

Home add -Advt

ತಮ್ಮ ಮನೆಗೆ ಆಗಾಗ ಬರುತ್ತಿದ್ದ, ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತಿದ್ದ , ತಾನು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿಯೇ ತನಗೆ 17 ವರ್ಷವಿರುವಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನಮ್ಮ ಮನೆಗೆ ಬಂದು ನನ್ನ ಕೆನ್ನೆಗೆ ಮುತ್ತಿಟ್ಟು, ಹೋಟೆಲ್ ನಲ್ಲಿ ತುಟಿಯನ್ನು ಚುಂಬಿಸಿದ್ದ ನನಗೆ ಇಷ್ಟವಿಲ್ಲದಿದ್ದರೂ ಅಸಹಾಯಕಳಾಗಿದ್ದೆ ಎಂದು ಬರೆದುಕೊಂಡಿದ್ದರು.

ಇದೀಗ ಮತ್ತೊಂದು ಘಟನೆಯನ್ನು ಬರೆದುಕೊಂಡಿರುವ ಕುಬ್ರಾ, 2013ರಲ್ಲಿ ನಡೆದ ಘಟನೆ ಅದು. ಆಗ ನನಗೆ 30 ವರ್ಷ. ಅಂಡಮಾನ್ ಪ್ರವಾಸದಲ್ಲಿದ್ದೆ. ವ್ಯಕ್ತಿಯೋರ್ವರ ಜತೆ ರಾತ್ರಿ ಹೋಟೆಲ್ ನಲ್ಲಿ ಉಳಿದಿದ್ದೆ. ನಾನಿನ್ನೂ ತಾಯಿಯಾಗಲು ಸಿದ್ಧಳಿರಲಿಲ್ಲ. ಆದರೆ ಆ ರಾತ್ರಿ ನಡೆದ ಘಟನೆ ನಾನು ಗರ್ಭ ಧರಿಸಿದೆ. ಆದರೆ ಆ ಮಗು ನನಗೆ ಬೇಡವಾಗಿತ್ತು. ಆದ್ದರಿಂದ ನಾನು ಗರ್ಭಪಾತ ಮಾಡಿಸಿಕೊಂಡೆ. ನಾನು ಗರ್ಭಪಾತ ಮಾಡಿಸಿದ್ದು ತಪ್ಪೆಂದು ನನಗೆ ಅನಿಸುತ್ತಿಲ್ಲ. ಕಾರಣ ನನಗೆ ಆ ಮಗು ಬೇಕೋ ಬೇಡವೋ ಎನ್ನುವುದಕ್ಕಿಂತ ಹೀಗೆ ಹುಟ್ಟಿದ ಮಗು ಸಮಾಜಕ್ಕೆ ಬೇಡ. ಆದ್ದರಿಂದ ನಾನು ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ ಎಂದು ಹೇಳಿದ್ದಾರೆ. ಘಟನೆಗೆ ಕಾರಣನಾದ ವ್ಯಕ್ತಿಯ ಹೆಸರನ್ನು ಕುಬ್ರಾ ಎಲ್ಲಿಯೂ ಉಲ್ಲೇಖಿಸಿಲ್ಲ.
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಅಮೃತಾ ನಾಯ್ಡು

Related Articles

Back to top button