Kannada NewsKarnataka NewsLatest

ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ : ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇವಾಲಯಗಳು ಮನಶಾಂತಿ ನೀಡುವ ಕೇಂದ್ರಗಳು. ಎಲ್ಲ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯನ್ನು ವಿಶೇಷ ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. 

ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದ ನೂತನ ಬಸವೇಶ್ವರ ದೇವಸ್ಥಾನ  ಹಾಗೂ ಸಮುದಾಯ ಭವನದ ನಿರ್ಮಾಣಕ್ಕಾಗಿ ಒಟ್ಟು 25 ಲಕ್ಷ ರೂ. ಗಳ ಪೈಕಿ ಮೊದಲನೇ ಕಂತನ್ನು ಈಗಾಗಲೇ ವಿತರಿಸಿದ್ದು,  ಎರಡನೇ ಕಂತನ್ನು  ಅವರು ದೇವಸ್ಥಾನ ಕಮಿಟಿಯವರಿಗೆ ಬುಧವಾರ ಹಸ್ತಾಂತರಿಸಿ ಮಾತನಾಡಿದರು.

Home add -Advt

ಎಲ್ಲ ಮೂಲಸೌಕರ್ಯಗಳ ಜೊತೆಗೆ ಸಮುದಾಯ ಭವನಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದು ಸಾರ್ವಜನಿಕರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಸದಾಶಿವ ಹಾಗೂ ದೇವಸ್ಥಾನ ಕಮಿಟಿಯವರು ಉಪಸ್ಥಿತರಿದ್ದರು.

26 ಕೋಟಿ ವೆಚ್ಚದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿಗೆ ಸಿಎಂ ಚಿಂತನೆ

Related Articles

Back to top button