Latest

ಯುವತಿಯಿಂದ ಯುವಕನಿಗೆ ಬ್ಲ್ಯಾಕ್ ಮೇಲ್; 5 ಲಕ್ಷ ರೂಪಾಯಿ ದೋಚಿದ ಗ್ಯಾಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಸೇರಿ ಯುವಕನನ್ನು ಬ್ಲ್ಯಾಕ್ ಮೇಲ್ ಮಾಡಿ 5 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಯುವಕನೊಂದಿಗೆ ಸಲುಗೆ ಬೆಳೆಸಿದ್ದಾಳೆ. ಲೈಂಗಿಕವಾಗಿ ಪ್ರಚೋದನೆ ನೀಡಿದ್ದಾಳೆ. ನಗ್ನ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ.

Home add -Advt

ಈ ಫೋಟೋಗಳನ್ನು ಇಟ್ಟುಕೊಂಡು ಯುವತಿ ಹಾಗೂ ಆಕೆಯ ಗ್ಯಾಂಗ್, ಸಿಬಿಐ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ, ಯುವತಿಯೊಬ್ಬಳು ಆತ್ಮಹಯೆ ಮಾಡಿಕೊಂಡಿದ್ದಾಳೆ. ಆಕೆ ಮೊಬೈಲ್ ನಲ್ಲಿ ನಿಮ್ಮ ನಗ್ನ ಫೋಟೋಗಳಿವೆ. ಇದನ್ನು ಮುಚ್ಚಿ ಹಾಕಲು 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಭಯಗೊಂಡ ಯುವಕ 5 ಲಕ್ಷ ರೂಪಾಯಿ ಹಣ ನೀಡಿದ್ದ. ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮುಂದುವರೆಸಿದ್ದಾರೆ.

ಅಂತಿಮವಾಗಿ ಯುವಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮಹಾರಾಷ್ಟ್ರದ ಬೆನ್ನಲ್ಲೇ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು; ಕಾಂಗ್ರೆಸ್ ಶಾಸಕರ ಅಸಮಾಧಾನದ ‘ಷಡ್ಯಂತ್ರ’ ಬಿಚ್ಚಿಟ್ಟ ದಿನೇಶ್ ಗುಂಡೂರಾವ್

Related Articles

Back to top button