Latest

ಬಿಜೆಪಿ ಶಾಸಕರು ಹಾಗೂ ಸ್ವಾಮೀಜಿಯೊಬ್ಬರಿಗೆ ಕೊಲೆ ಬೆದರಿಕೆ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹಾಗೂ ಬೋವಿಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಕೊಲೆ ಸಂಚು ರೂಪಿಸಲಾಗಿರುವ ಬಗ್ಗೆ ಬೆದರಿಕೆ ಸಂದೇಶ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹಾಗೂ ಸಿದ್ದರಾಮೇಶ್ವರ ಶ್ರೀಗಳ ಕೊಲೆ ಮಾಡುವುದಾಗಿ ಅಪರಿಚಿತರು ಕೆ ಎಸ್ ಪಿ ಆಪ್ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾದಿಕಾರಿ ಪರಶುರಾಮ್ ತಿಳಿಸಿದ್ದಾರೆ.

Home add -Advt

ಹೊಳಲ್ಕೆರೆ ಠಾಣೆಯಲ್ಲಿಯೂ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದ್ದು, ಶೋಘ್ರದಲ್ಲಿಯೇ ಆರೋಪಿಗಳ ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಆದೇಶ ವಾಪಸ್ ಗೆ ಮುಖ್ಯಮಂತ್ರಿಗಳು ನೀಡಿದ ಸ್ಪಷ್ಟೀಕರಣವೇನು?

Related Articles

Back to top button