Latest

ಆರ್ಥಿಕ ಮುಗ್ಗಟ್ಟು ಮುಂಬೈ ತೊರೆಯುವ ನಿರ್ಧಾರಕ್ಕೆ ತಂದಿತ್ತು ಎಂದ ನಟಿ

ಪ್ರಗತಿವಾಹಿನಿ ನ್ಯೂಸ್, ಮುಂಬೈ: ವೆಬ್ ಸೀರೀಸ್ ನಲ್ಲಿ ಇಳಾ ಬಾಜಪೈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಂಚಿದ ಯುವ ನಟಿ ಮೋನಿಕಾ ಚೌಧರಿ ತಮ್ಮ ಹಳೆಯ ದಿನಗಳ ಸಂಕಟಗಳನ್ನು ತೆರೆದಿಟ್ಟಿದ್ದಾರೆ.

“ಅನೇಕ ಯಶಸ್ವೀ ಶೋಗಳಲ್ಲಿ ಪಾತ್ರ ನಿರ್ವಹಿಸಿದರೂ ಮುಂಬೈಯಲ್ಲಿ ಆರ್ಥಿಕ ಮುಗ್ಗಟ್ಟು ನಾನು ಎದುರಿಸುತ್ತಿದ್ದ ಮೊದಲ ಸಮಸ್ಯೆಯಾಗಿತ್ತು. ಬಿಲ್ ಗಳು, ಬಾಡಿಗೆ, ಬಜೆಟ್ ಎಲ್ಲವನ್ನೂ ನಿಭಾಯಿಸುವುದು ಕಷ್ಟಕರವಾಗಿತ್ತು. ಒಂದು ತುತ್ತು ಉಣ್ಣಲಿಕ್ಕೂ ಹಣವಿಲ್ಲದ ಆ ಕಾಲವಿತ್ತು. ರಾತ್ರಿ ನಿದ್ದೆ ಕೂಡ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಮುಂಬೈ ತೊರೆದು ವಾಪಸ್ ಹೋಗಲು ನಿರ್ಧರಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.

Home add -Advt

ದಿನವೊಂದಕ್ಕೆ ನಾಲ್ಕೈದು ಆಡಿಷನ್ ಗಳನ್ನು ಕೊಟ್ಟರೂ ಎಲ್ಲವೂ ರಿಜೆಕ್ಟ್ ಆಗುತ್ತಿದ್ದವು. ಕಾರಣ ಏನೆಂದು ತಿಳಿದಿಲ್ಲ. ನನ್ನಿಂದಾದ ತಪ್ಪೇನು ಎಂಬುದೇ ಅರ್ಥವಾಗುತ್ತಿರಲಿಲ್ಲ.

Related Articles

Back to top button