Kannada NewsKarnataka NewsNational

*ಆಹಾರ ಅರಸಿ ಗ್ರಾಮಕ್ಕೆ ಬಂದ ಕರಡಿ *

ಪ್ರಗತಿವಾಹಿನಿ ಸುದ್ದಿ: ಆಹಾರ ಅರಸಿ ಗ್ರಾಮಕ್ಕೆ ಬಂದ ಕರಡಿ ನೋಡಿದ ಜನರು ಗಾಬರಿಯಾಗಿದ್ದಾರೆ. ಕರಡಿಯನ್ನು ಗ್ರಾಮದಿಂದ ಓಡಿಸಲು ಜನರು ಹರಸಾಹಸ ಪಟ್ಟಿದ್ದಾರೆ. 

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮಕ್ಕೆ ಕರಡಿ ಏಕಾಏಕಿ ಪ್ರತ್ಯಕ್ಷವಾಗಿದ್ದು, ಕರಡಿ ನೋಡಿದ ಜನರು ಒಂದು ಕ್ಷಣ ಬೆಚ್ಚಿಬಿದಿದ್ದಾರೆ.‌ ಗ್ರಾಮಕ್ಕೆ ಬಂದ ಕರಡಿ ಕಂಡು ಜನರು ದಿಕ್ಕೆಟ್ಟು ಓಡಿದ್ದಾರೆ.‌ ಇದರಿಂದ ಗ್ರಾಮದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.‌

Home add -Advt

ಜನರ ಕೂಗಾಟ ಕಂಡು ಗ್ರಾಮದಿಂದ ಕಾಡಿನ ಕಡೆಗೆ ಕರಡಿ ಹೋಗಿದೆ. ನಾಡಿನಿಂದ ಕಾಡಿಗೆ ಕರಡಿ ಹೋಗಿದ್ದರಿಂದ ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

Related Articles

Back to top button