*ಮೂರೆ ತಿಂಗಳಲ್ಲಿ ಬಾಡಿ ಹೋಯ್ತು ಸುಂದರ ಕುಟುಂಬ: ನವವಿವಾಹಿತೆ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ : ಮದುವೆ ಆಗಿ ಮೂರೇ ತಿಂಗಳಿಗೆ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ನಡೆದಿದೆ.
ಅಮೂಲ್ಯ(23)ನೇಣಿಗೆ ಶರಣಾದ ನವವಿವಾಹಿತೆಯಾಗಿದ್ದು, ಆಕೆಯ ಪೋಷಕರು ಪತಿಯ ಕುಟುಂಬದವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಅಂದ್ರಹಳ್ಳಿಯಲ್ಲಿ ಅಮೂಲ್ಯ ವಾಸವಿದ್ದು, ವಿದ್ಯಾಮಾನ್ಯ ನಗರದಲ್ಲಿ ಅಭಿಶೇಕ್ ವಾಸವಿದ್ದರು. ಅಕ್ಕಪಕ್ಕದ ಏರಿಯಾದವರಾದ ಇವರಿಬ್ಬರಲ್ಲಿ ಪ್ರೀತಿ ಅಂಕುರಿಸಿತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಬುಧವಾರ ಅಮೂಲ್ಯ ಅಭಿಶೇಕ್ (30) ಇಬ್ಬರೂ ಮದುವೆಯಾಗಿ 3 ತಿಂಗಳು ಕಳೆದಿತ್ತು. ಆದರೆ ಏಕಾಏಕಿ ಅಭಿಶೇಕ್ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ.ಅಮೂಲ್ಯ ಆತ್ಮಹತ್ಯೆಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.
ಆದರೆ ಅಭಿಶೇಕ್ ಕುಟುಂಬದವರೇ ನಮ್ಮ ಮಗಳ ಸಾವಿಗೆ ಕಾರಣ ಎಂದು ಅಮೂಲ್ಯ ಕುಟುಂಬದವರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
