Politics

*ಕರಿಯಣ್ಣ ಎಂದಿದ್ದ ಜಮೀರ ವಿರುದ್ಧ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ : ಚನ್ನಪಟ್ಟಣದ ಉಪಚುನಾವಣೆ ಪ್ರಚಾರದ ಭಾಷಣದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ ಕರಿಯ ಕುಮಾರಸ್ವಾಮಿ (ಕಾಲಿಯಾ ಕುಮಾರಸ್ವಾಮಿ) ಎಂಬ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕುಮಾರಸ್ವಾಮಿಯವರನ್ನು ಜಮೀರ್ ಅಹ್ಮದ್ ಅವರು ಕರಿಯ ಎಂದು ಹೇಳುವ ಮೂಲಕ ವರ್ಣಭೇದ ಪ್ರದರ್ಶಿಸಿ ನಿಂದಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕಾನೂನ ಕ್ರಮಕೈಗೊಳ್ಳಬೇಕು ಎಂದು ವಕೀಲ ಮಹೇಶ್ ಎಂಬುವವರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆಂದು ತಿಳಿದುಬಂದಿದೆ.

Home add -Advt

ಈ ಹಿಂದೆ ಕುಮಾರಸ್ವಾಮಿ ಅವರೊಂದಿಗೆ ನಾನು ಇದ್ದಾಗ ನನ್ನನ್ನು ಅವರು ಪ್ರೀತಿಯಿಂದ ಕುಳ್ಳ ಎನ್ನುತ್ತಿದ್ದರು. ಅದೇ ರೀತಿ ನಾನೂ ಸಹ ಅವರನ್ನು ಪ್ರೀತಿಯಿಂದಲೇ ಕರಿಯ ಕುಮಾರಣ್ಣ ಎನ್ನುತ್ತಿದ್ದೆ ಎಂದು ಜಮೀರ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೂಡಾ ಕೇಳಿದರು.

Related Articles

Back to top button