Belagavi NewsBelgaum NewsKannada NewsKarnataka News

*ಲೋಕ ಆದಾಲತ್ ನಲ್ಲಿ ಒಂದಾದ ದಂಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳು ರಾಜಿಯಾದವು. ಅದರಲ್ಲಿ ವೈವಾಹಿಕ ಹಕ್ಕುಗಳ ಪುನ‌ರ್ ಸ್ವಾಧಿನತೆಗಾಗಿ ಸಲ್ಲಿಸಿದ ಪ್ರಕರಣವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿತು.

Home add -Advt

ಹಿರಿಯ ದಿವಾಣಿ ನ್ಯಾಯಧೀಶ ರವಿ ಚವ್ಹಾಣ ನೇತೃತ್ವದಲ್ಲಿ ನಡೆದ ಲೋಕ ಆದಾಲತ್‌ನಲ್ಲಿ ಪತಿ-ಪತ್ನಿ ಮಗಳ ಉಜ್ವಲ ಭವಿಷ್ಯಕ್ಕಾಗಿ ಕೂಡಿ ಬಾಳುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅವರಿಗೆ ಹೂ ಮಾಲೆ ಹಾಕಿಸಿ, ಸಿಹಿ ತಿನ್ನಿಸಿದರು.

ಅರ್ಜಿದಾರಳ ಪರವಾಗಿ ವಕೀಲ ಆರ್ ಎ ಪಾಟೀಲ, ಎದುರುಗಾರ ಪರ ವಕೀಲ ಆನಂದ ತುರಮರಿ ಸಂಧಾನಕಾರರಾಗಿ ಬಿ ಬಿ ದೋತ್ರದ ವಕಾಲತ್ತು ವಹಿಸಿದ್ದರು. ವಕೀಲರು, ಕಕ್ಷಿದಾರರು ಇದ್ದರು. ಸುಮಾರು 557 ವಿವಿಧ ಪ್ರಕರಣಗಳು ಇತ್ಯರ್ಥಗೊಂಡವು.

Related Articles

Back to top button