
ಪ್ರಗತಿವಾಹಿನಿ ಸುದ್ದಿ, ಘಾಜಿಯಾಬಾದ್: ಗ್ರೇಟರ್ ನೊಯ್ಡಾ ಮೂಲದ ವ್ಯಕ್ತಿಯೊಬ್ಬರು ಮಹಿಂದ್ರಾ XUV400 ಎಲೆಕ್ಟ್ರಿಕ್ ಕಾರನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಿದ್ದಾರೆ.
ಖರೀದಿ ವೇಳೆ ತಾವು ಕೇಳಿದ ಗುಣಮಟ್ಟದ ಶ್ರೇಣಿಯ ಕಾರನ್ನು ಕಂಪನಿ ಒದಗಿಸಿಲ್ಲ ಎಂಬ ಕಾರಣ ಆಕ್ರೋಶಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅವರು, ಘಾಜಿಯಾಬಾದ್ ನ ಮಹೀಂದ್ರಾ ಶೋರೂಂ ಎದುರು ಕಾರನ್ನು ನಿಲ್ಲಿಸಿ ಕಸದ ತೊಟ್ಟಿಯಾಗಿಸಿದ್ದಾರೆ.
ಕಸದ ತೊಟ್ಟಿಯಾದ ಕಾರಿಗೆ ಪೋಸ್ಟರ್ ಒಂದನ್ನು ಅಳವಡಿಸಿದ್ದು ಅದರಲ್ಲಿ “ಎಲೆಕ್ಟ್ರಿಕ್ XUV400 ಅನ್ನು ಖರೀದಿಸುವುದು ನಿಮ್ಮ ಸ್ವಂತ ಮನೆಯನ್ನು ಸುಟ್ಟುಹಾಕಿದಂತೆ. ವಾಹನವನ್ನು ಚಾರ್ಜ್ ಮಾಡಲು ಮನೆಯಲ್ಲಿ 10 ಕಿಲೊವ್ಯಾಟ್ ಸಂಪರ್ಕದ ಅಗತ್ಯವಿದೆ. ಆಸಕ್ತರು ಹೊರಗೆ ಚಾರ್ಜ್ ಮಾಡಲು ಬಯಸಿದರೆ, ಸುಮಾರು ಒಂದು ಸಾವಿರ ರೂ. ವೆಚ್ಚವಾಗುತ್ತದೆ. ಶಿವ ಮಹೀಂದ್ರಾ ನಿಮಗೆ ನಾಚಿಕೆಯಾಗಬೇಕು” ಎಂದು ಬರೆದಿದ್ದಾರೆ.
ಈ ವಿಷಯ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಕಂಪನಿಯನ್ನು ಟೀಕಿಸಿದರೆ ಇನ್ನಷ್ಟು ಜನ ವಾಹನ ಸರಿಯಾಗಿ ಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ