ಪ್ರಗತಿವಾಹಿನಿ ಸುದ್ದಿ, ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೋಹಿತ್ ಸಿ.ಪಿ. ಆತ್ಮಹತ್ಯೆಗೆ ಶರಣಾದವ. ಈತ ವಿಜಯನಗರ ಜಿಲ್ಲೆಯ ಕೊಟ್ಟೂರಿನವನಾಗಿದ್ದು ಕೃಷಿ ವಿವಿ ಹಾಸ್ಟೆಲ್ ನಲ್ಲಿದ್ದ. ಭಾನುವಾರ ಮೆಸ್ ನಲ್ಲಿ ಊಟ ಮುಗಿಸಿ ಕೊಠಡಿಗೆ ಹೋಗಿದ್ದ. ನಂತರದಲ್ಲಿ ಸಹಪಾಠಿಗಳು, ಕುಟುಂಬದವರು ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ.
ವಿದ್ಯಾರ್ಥಿಯೊಬ್ಬ ಕಿಟಕಿಯಿಂದ ನೋಡಿದಾಗ ಈತನ ಶವ ನಗ್ನ ಸ್ಥಿತಿಯಲ್ಲಿ ಫ್ಯಾನ್ ಗೆ ನೇತಾಡುತ್ತಿತ್ತು. ವಿವಸ್ತ್ರನಾಗಿ ಸಾವಿಗೆ ಶರಣಾದ ಹಿನ್ನೆಲೆ ಏನೆಂಬುದು ತಿಳಿದುಬಂದಿಲ್ಲ. ಉಪನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೋಸ್ಟ್ ಮಾರ್ಟಂ ನಂತರ ಯುವಕನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ.
ನಮಗೆ ಜನಬೆಂಬಲ ಸಿಗುವುದು ನೋಡಿ ಬಿಜೆಪಿ, ಜೆಡಿಎಸ್ ಗೆ ಭಯ: ಡಿ.ಕೆ. ಶಿವಕುಮಾರ್
https://pragati.taskdun.com/bjp-jds-fear-seeing-we-get-peoples-support-d-k-shivakumar/
ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು
https://pragati.taskdun.com/women-beads-fought-on-the-plane/
ಸ್ಪಟಿಕ ಸ್ಪಷ್ಟ ನದಿಯಲ್ಲಿ ಮಹಿಳೆ ದೋಣಿಯಾನ: ಸಖತ್ ವೈರಲ್ ಆದ ಅಪರೂಪದ ವಿಡಿಯೊ
https://pragati.taskdun.com/woman-boating-in-crystal-clear-river-rare-video-goes-viral/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ