Belagavi NewsBelgaum NewsKannada NewsKarnataka News

*ಗಂಡ, ಅತ್ತೆಯ ಕಾಟಕ್ಕೆ ಮಗನ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಂಡ ಹಾಗೂ ಅತ್ತೆಯ ಕಾಟಕ್ಕೆ ಬೆಸತ್ತು ಮಹಿಳೆ ತನ್ನ ಗಂಡು ಮಗುವಿನ ಜೊತೆ ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಲಕಾಂಬ ಗ್ರಾಮದ ಕವಿತಾ ಬಸವಂತ ಜುನೇ (40) ಬೆಳಗಾಂವಕರ ಮತ್ತು ಸಮರ್ಥ ಬಸವಂತ ಜುನೇ ಬೆಳಗಾಂವಕರ (14) ಎಂದು ಗುರುತಿಸಲಾಗಿದೆ. ಮಹಿಳೆಯ ಮೂಲತಃ ಜಾಂಬೋಟಿ ರಸ್ತೆಯ ಕಿಣಯೇ ಗ್ರಾಮದವರು ಎನ್ನಲಾಗಿದೆ. ಇದೀಗ ಪೊಲೀಸರು ಹಾಗೂ ಸಾರ್ವಜನಿಕರು ಅವರ ಗುರುತು ಪತ್ತೆ ಹಚ್ಚಿದ್ದಾರೆ. ಪೊಲೀಸರು ತನಿಖೆ ನಡೆಸಿ ಘಟನೆಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Home add -Advt

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾಯಿ, ಮಗ ಕೆರೆಯ ಬಳಿ ಚಪ್ಪಲಿ ತೆಗೆದು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಡೆತ್ ನೋಟ್ ಸಿಕ್ಕಿದೆ.

Related Articles

Back to top button