ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು, ಹಲಾಲ್-ಜಟ್ಕಾ ಕಟ್ ಬಳಿಕ ಇದೀಗ ಆಜಾನ್ ಹಾಗೂ ಭಜನಾ ವಿವಾದಗಳು ಆರಂಭವಾಗಿದ್ದು, ಮಸಿದಿಗಳಲ್ಲಿನ ಧ್ವನಿವರ್ಧಕಗಳನ್ನು ಏಪ್ರಿಲ್ 13ರೊಳಗೆ ತೆರವುಗೊಳಿಸುವಂತೆ ಹಿಂದೂ ಪರ ಸಂಘಟನೆಗಳು ಗಡುವು ನೀಡಿವೆ.
ಆಜಾನ್ ಅಥವಾ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ಹಿಂದೆಯೇ ಹೈಕೋರ್ಟ್ ಆಜಾನ್ ಮಾತ್ರವಲ್ಲ ಎಲ್ಲ ರೀತಿಯ ಮೈಕ್, ಶಬ್ಧಮಿತಿಯ ಬಗ್ಗೆ ಆದೇಶ ನೀಡಿದೆ. ಕಡಿಮೆ ಡೆಸೆಂಬಲ್ ನಲ್ಲಿ ಮಾತ್ರ ಮೈಕ್ ಬಳಕೆಯಾಗಬೇಕು ಎಂದಿದೆ. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಲ್ಲರೂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಹೇಳಿದ್ದಾರೆ.
ಆಜಾನ್ ಗೆ ಮಾತ್ರ ಶಬ್ಧ ಮಿತಿ ಇಲ್ಲ, ಬಸ್ ಗಳಿಗೂ ಶಬ್ಧ ಮಿತಿ ಆದೇಶವಿದೆ. ಶಬ್ಧ ಮಿತಿ ಕುರಿತು ಮಸೀದಿ, ಮಂದಿರ, ದೇವಸ್ಥಾನ ಸೇರಿದಂತೆ ಎಲ್ಲೆಡೆಗಳಲ್ಲೂ ಮೈಕ್ ಬಳಕೆ ಬಗ್ಗೆ ಮಿತಿ ಹೇರಲಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ನೀಡಿರುವ ಆದೇಶ ಜಾರಿಗೆ ತರಲು ಪೊಲೀಸರಿಗೆ ಸೂಚಿಸಲಾಗಿದೆ. ನ್ಯಾಯಾಲಯದ ಆದೆಶ ಪಾಲಿಸಿದರೆ ಎಲ್ಲವೂ ಸರಿ ಹೋಗಲಿದೆ ಎಂದರು.
ಬೊಮ್ಮಾಯಿ ಮೂಕ ಬಸವ ಆಗಿದ್ದಾರೆ; ಸೂತ್ರದ ಗೊಂಬೆಯಂತಾದ ಸಿಎಂ; ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ