Latest

ಎಸಿಬಿ ದಾಳಿ; ಜೈಲುಪಾಲಾದ ಶಾಂತಗೌಡ; ಕಾರಣ ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಎಸಿಬಿ ದಾಳಿ ವೇಳೆ ನಕರಾ ಮಾಡಿದ್ದ PWD ಜೆಇ ಶಾಂತಗೌಡ ಬಿರಾದಾರ್ ಇದೀಗ ಜೈಲು ಪಾಲಾಗಿದ್ದಾರೆ. ನಿನ್ನೆ ತಡರಾತ್ರಿಯೇ ಎಸಿಬಿ ಅಧಿಕಾರಿಗಳು ಶಾಂತಗೌಡನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಶಾಂತಗೌಡ ಅವರ ಕಲಬುರ್ಗಿಯ ನಿವಾಸದಲ್ಲಿ ಎಸಿಬಿ ದಾಳಿ ವೇಳೆ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿತ್ತು. ನೀರಿನ ಪೈಪ್ ಗಳಲ್ಲೂ ಕಂತೆ ಕಂತೆ ಹಣವನ್ನು ಶಾಂತ ಗೌಡ ಇಟ್ಟಿದ್ದರು. ಎಸಿಬಿ ಅಧಿಕಾರಿಗಳು ದಾಳಿ ವೇಳೆ ಬಚ್ಚಿಟ್ಟಿದ್ದ ಸಂಪತ್ತನ್ನು ಬಯಲು ಮಾಡಿದ್ದಾರೆ.

Home add -Advt

ಅಧಿಕಾರಿಗಳು ದಾಳಿಗೆ ಬಂದಾಗ ಬಾಗಿಲು ತೆರೆಯದೇ ಸುಮಾರು 15 ನಿಮಿಷಗಳ ಕಾಲ ಶಾಂತಗೌಡ ಸತಾಯಿಸಿದ್ದರು. ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎನ್ನುವ ಆರೋಪವಿದೆ.

ಎಸಿಬಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ಶಾಂತಗೌಡ ಅವರನ್ನು ಬಂಧಿಸಿದ ಅಧಿಕಾರಿಗಳು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಸಧ್ಯ ಶಾಂತಗೌಡ ಬಿರಾದಾರ್ ಕಲಬುರ್ಗಿ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಡಿಸೆಂಬರ್ 6ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ

Related Articles

Back to top button