Latest

ಸಿಎಂ ಬೊಮ್ಮಾಯಿ ಓರ್ವ ಕೋಮುವಾದಿ; ನಟ ಚೇತನ್ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಬಸವರಾಜ್ ಬೊಮ್ಮಾಯಿ ಕೋಮುವಾದಿ ಸಿಎಂ. ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದರೂ ಮಸೂದೆ ಮಂಡಿಸಿರುವುದು ಖಂಡನೀಯ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಚೇತನ್, ಸಿಎಂ ಬೊಮ್ಮಾಯಿ ಅವರಷ್ಟು ಯಾವ ಸಿಎಂ ಕೂಡ ಕೋಮುವಾದಿಯಾಗಿರಲಿಲ್ಲ. ಅವರ ತಂದೆ ಪ್ರಗತಿಪರ ಸಿಎಂ ಆಗಿದ್ದರು. ಅಂಬೇಡ್ಕರ್, ಬಸವಣ್ಣ ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎಂಬುದು ಸಂವಿಧಾನದಲ್ಲಿದೆ ಎಂದರು.

Home add -Advt

ಬಲವಂತವಾಗಿ ಮತಾಂತರವಾಗಿದ್ದರೆ ಕ್ರಮ ಕೈಗೊಳ್ಳಲಿ. ಆದರೆ ಹೆದರಿಸಿ ಬೆದರಿಸಿ ಕಾಯ್ದೆ ಜಾರಿಗೊಳಿಸುವುದು ಸರಿಯಲ್ಲ. ಇದು ಅಲ್ಪಸಂಖ್ಯಾತರು, ಕ್ರಿಶ್ಚಿಯನ್ ರ ಮೇಲೆ ದಬ್ಬಾಳಿಕೆ ನಡೆಸಿ ಕಾಯ್ದೆ ತಂದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ವಿದೇಶ ಪ್ರವಾಸ : ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Related Articles

Back to top button