Film & EntertainmentKannada NewsKarnataka NewsLatest

*ಮಹಿಳೆ ಮೇಲೆ ನಟ ದರ್ಶನ್ ಸಾಕು ನಾಯಿ ಅಟ್ಯಾಕ್; ಪೊಲೀಸ್ ಠಾಣೆಯಲ್ಲಿ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಟ ದರ್ಶನ್ ಅವರ ಸಾಕು ನಾಯಿಗಳು ಮಹಿಳೆಯನ್ನು ಕಚ್ಚಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದರ್ಶನ್ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆಯ ಮೇಲೆ ದಾಳಿ ನಡೆಸಿ, ಕಚ್ಚಿದೆ. ನಾಯಿ ಕಚ್ಚಿದರೂ ಕೂಗಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಮಹಿಳೆ ದೂರಿದ್ದಾರೆ.

Home add -Advt

ಪ್ರಕರಣ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಉದ್ದೇಶಪೂರ್ವಕವಾಗಿ ನಾಯಿಗಳನ್ನು ಬಿಡಲಾಗಿದೆ. ನಾಯಿ ಕಚ್ಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ. ನನ್ನ ಹೊಟ್ಟೆ ಭಾಗದಲ್ಲಿ ರಕ್ತಬರುತ್ತಿತ್ತು. ಆದರೂ ಸಹಾಯ ಮಾಡಿಲ್ಲ. ಇಂಜಕ್ಷನ್ ತೆಗೆದುಕೊಂಡುಬಿಡಿ ಸರಿಹೋಗುತ್ತೆ ಎಂದು ಮನೆಯ ಸ್ಟಾಫ್ ಹೇಳಿದರು ಎಂದು ಮಹಿಳೆ ಅಮಿತಾ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಇಂದು ಪೊಲೀಸರು ನಟ ದರ್ಶನ್ ಮನೆಯ ಸಿಬ್ಬಂದಿಗಳನ್ನು ವಿಚಾರಣೆ ನಡೆಸಲಿದ್ದಾರೆ.


Related Articles

Back to top button