CrimeFilm & EntertainmentKannada NewsKarnataka News
*ನಟಿಗೆ ಗುಪ್ತಾಂಗದ ಫೋಟೋ ಕಳುಹಿಸಿ ಟಾರ್ಚರ್- ಶೆಡ್ ಗೆ ಕರೆಯದೆ ದೂರು ನೀಡಿದ ನಟಿ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೋರ್ವ ಯುವಕ ಸೀರಿಯಲ್ ನಟಿಗೆ ಗುಪ್ತಾಂಗದ ಫೋಟೋಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಕನ್ನಡದ ಕಿರುತೆರೆ ನಟಿಗೆ ವ್ಯಕ್ತಿಯೋರ್ವ ಸೋಶಿಯಲ್ ಮೀಡಿಯಾದಲ್ಲಿ ಗುಪ್ತಾಂಗದ ಫೋಟೋ ಕಳುಹಿಸಿ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ ನಿಡಿದ್ದಾನೆ.
ಆ ವ್ಯಕ್ತಿಯ ಅಕೌಂಟ್ನ ಬ್ಲಾಕ್ ಮಾಡಿದ ಹೊರತಾಗಿಯೂ ಬೇರೆ ಖಾತೆಯಿಂದ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಆ ಬಳಿಕ ಸ್ವತಃ ನಟಿ ಆತನಿಗೆ ಬುದ್ಧಿವಾದ ಹೇಳಿದ್ದಳು.
ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ವ್ಯಕ್ತಿ ಇವನಾಗಿದ್ದು, ವೈಟ್ಫೀಲ್ಡ್ ಅಲ್ಲಿ ವಾಸವಿದ್ದಾನೆ. ಡಿಲವರಿ ಮ್ಯಾನೆಜರ್ ಆಗಿ ನವೀನ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




