Latest

ಸಾರಿಗೆ ನೌಕರರ ಹೋರಾಟದ ಗೌರವಾಧ್ಯಕ್ಷ ಕೋಡಿಹಳ್ಳಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಸಾರಿಗೆ ನೌಕರರ ಹೋರಾಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗೆ ಜನರನ್ನು, ರೈತರನ್ನು ಒಂದೆಡೆ ಸೇರಿಸುವ ತಾಕತ್ತಿಲ್ಲ. ಎಲ್ಲಿ ಜನ, ರೈತರು ಸೇರಿರುತ್ತಾರೋ ಅಲ್ಲಿ ಹೋಗಿ ಬಿಟ್ಟಿ ಭಾಷಣ ಮಾಡುತ್ತಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ. ಅವರಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಅವರು ಸಮಸ್ಯೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಾರಿಗೆ ನೌಕರರು, ಇಂತಹ ದಲ್ಲಾಳಿಗಳನ್ನು ಬಿಟ್ಟು ಬಂದು ಸರ್ಕಾರದ ಜೊತೆ ಮಾತುಕತೆ ನಡೆಸಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.

 

Related Articles

Back to top button