ಅಮರನಾಥ ಯಾತ್ರೆಗೆ ಹೋಗಿದ್ದ ಬೆಳಗಾವಿ ಮಹಿಳೆ ಮೊಬೈಲ್ ಸ್ವಿಚ್ ಆಫ್; ಸಂಪರ್ಕ ಸಾಧಿಸಲು ಜಿಲ್ಲಾಡಳಿತದ ಸತತ ಪ್ರಯತ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಮರನಾಥ ಯಾತ್ರೆಗೆ ಹೋಗಿದ್ದ ಇಲ್ಲಿನ ಮಹಿಳೆಯೊಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕ ಸಾಧಿಸುವುದು ಕಷ್ಟಕರವಾಗಿ ಪರಿಣಮಿಸಿದೆ.
ದೇವರಾಜ ಅರಸ್ ಕಾಲೋನಿಯ ಸೀಮಾ ಬೆಳಗೂರ ಎಂಬುವವರು ಬೆಂಗಳೂರಿನ ಹೈಕೋರ್ಟ್ ತಂಡದೊಂದಿಗೆ ಜು.5ರಂದು ಅಮರನಾಥ ಯಾತ್ರೆಗೆ ಹೋಗಿದ್ದರು. ಆದರೆ ಅಮರನಾಥ ಗುಹೆ ಬಳಿ ನಡೆದ ಮೇಘಸ್ಫೋಟದ ಘಟನೆ ನಂತರ ಅವರನ್ನು ಕುಟುಂಬದವರು, ಜಿಲ್ಲಾಡಳಿತದವರು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಸೀಮಾ ಅವರು ಹೈಕೋರ್ಟ್ ಉದ್ಯೋಗಿಯಾಗಿದ್ದು ಅವರ ಪತಿ ಸುಧಾಕರ ಸಿ.ಕೆ. ಅವರು ಸಿಮೆಂಟ್ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾರೆ. ಸೀಮಾ ಅವರು ಒಂದು ದಿನದ ಹಿಂದಷ್ಟೇ ಸಂಪರ್ಕಕ್ಕೆ ಸಿಕ್ಕಿದ್ದು ಅಲ್ಲಿ ನಹವಾಮಾನ ವೈಪರೀತ್ಯದಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜಿಲ್ಲಾ ಆಡಳಿತ ಸೀಮಾ ಅವರೊಂದಿಗೆ ಸಂಪರ್ಕ ಸಾಧಿಸಲು ಸತತ ಪ್ರಯತ್ನಗಳನ್ನು ಜಾರಿಯಿರಿಸಿದೆ.
ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ