Latest

ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರ ಸಾವು

ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಸುರತ್ಕಲ್ ಬಳಿ ಮೀನು ಹಿಡಿಯಲು ಬೀಸಿದ ಬಲೆಯಲ್ಲಿ ಮೀನುಗಾರರೊಬ್ಬರು ತಾವೇ ಸಿಲುಕಿ ಮೃತಪಟ್ಟಿದ್ದಾರೆ.

ಮೀನುಗಾರ ಜಯರಾಜ್ ಅವರು ಮೀನು ಹಿಡಿಯಲು ಬಲೆ ಬೀಸಿದ್ದರು. ಆ ಬಲೆಯಲ್ಲಿ ಅವರ ಕಾಲು ಸಿಲುಕಿತ್ತು. ಇದೇ ವೇಳೆ ಭಾರೀ ಗಾತ್ರದ ತೆರೆ ಬಂದು ಅಪ್ಪಳಿಸಿದಾಗ ಜಯರಾಜ್ ಅವರು ಬಲೆಯಲ್ಲಿ ಸುತ್ತಿಕೊಂಡು ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

Home add -Advt

ಘಟನೆ ಸಂಭವಿಸಿದ ವೇಳೆ ಅವರ ಜೊತೆಗಿದ್ದವರು ತಕ್ಷಣ ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದು ಹಲವರು ರಕ್ಷಣೆಗೆ ಬಂದರೂ ಅವರನ್ನು ಬದುಕಿಸಲಾಗಲಲಿಲ್ಲ. ಜಯರಾಜ್ ಅವರಿಗೆ ಪತ್ನಿ, ಮಗಳು ಇದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

https://pragati.taskdun.com/siddaramaiah-cm-dkshi-dcm-official-announcement-not-yet-done/
https://pragati.taskdun.com/mangalorebusfire-accident/
https://pragati.taskdun.com/sirsi-accidental-fire-broke-out-on-2-acre-hill-nut-plantation-burnt-down/

Related Articles

Back to top button