Belagavi NewsBelgaum NewsKannada NewsKarnataka NewsLatest

*ಪಯೋನೀಯರ್ ಬ್ಯಾಂಕ್ ನಿರ್ವಹಣಾ ಅಧ್ಯಕ್ಷರಾಗಿ ಅನಂತ ಲಾಡ್ ನೇಮಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ನಗರದ ಅತ್ಯಂತ ಹಳೆಯ ಬ್ಯಾಂಕ್ ದಿ ಪಯೋನೀರ್ ಅರ್ಬನ್ ಬ್ಯಾಂಕಿನ  ಬೋರ್ಡ್ ಆಫ್ ಮ್ಯಾನೇಜ್ಮೆಂಟ್ (BOM) ಮಂಡಳಿಯ ಅಧ್ಯಕ್ಷರಾಗಿ ಅನಂತ ಲಾಡ್ ಆಯ್ಕೆಯಾಗಿದ್ದಾರೆ.

ರೂ. 100 ಕೋಟಿ ಗಿಂತ ಹೆಚ್ಚಿನ ಠೇವಣಿ ಹೊಂದಿರುವ ಸಹಕಾರಿ ಬ್ಯಾಂಕುಗಳು  ನಿರ್ವಹಣಾ ಮಂಡಳಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಅದರಂತೆ, ಪಯೋನೀಯರ್ ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ ಅವರು ನಿರ್ವಹಣಾ ಮಂಡಳಿಯ ಹೆಸರುಗಳನ್ನು ರಿಸರ್ವ್ ಬ್ಯಾಂಕ್‌ಗೆ ಕಳಿಸಿದ್ದರು. ರಿಸರ್ವ್ ಬ್ಯಾಂಕ್‌ ಈ ಹೆಸರುಗಳನ್ನು ಅನುಮೋದಿಸಿದೆ.

Home add -Advt

ಅನಂತ ಲಾಡ್ ಅವರನ್ನು ನಿರ್ವಹಣಾ ಮಂಡಳಿಯ ಅಧ್ಯಕ್ಷರನ್ನಾಗಿ, ನಿರ್ದೇಶಕ ಗಜಾನನ ಪಾಟೀಲ ಅವರನ್ನು ಸದಸ್ಯರನ್ನಾಗಿ, ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಹಿರೇಮಠ ಅವರನ್ನು ಬ್ಯಾಂಕಿಂಗ್ ತಜ್ಞರಾಗಿ, ವಕೀಲ ಕಮಲೇಶ್ ಮಾಯಾನಾಚೆ ಅವರನ್ನು ಕಾನೂನು ತಜ್ಞರಾಗಿ ಮತ್ತು ಎಂಜಿನಿಯರ್ ಜ್ಞಾನೇಶ್ವರ ಸೈನೇಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಏಪ್ರಿಲ್ 28 ರಂದು ನಡೆದ ಬ್ಯಾಂಕಿನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ, ಪ್ರದೀಪ ಅಷ್ಟೇಕರ ಅವರು ರಿಸರ್ವ್ ಬ್ಯಾಂಕಿನಿಂದ ಅನುಮತಿ ಪಡೆದಿರುವುದಾಗಿ ತಿಳಿಸಿದರು. ಆರಂಭದಲ್ಲಿ, ಬ್ಯಾಂಕಿನ ಸಿಇಒ ಅನಿತಾ ಮುಲ್ಯಾ ಅವರು ಹಾಜರಿದ್ದ ಆಡಳಿತ ಮಂಡಳಿಯನ್ನು ಸ್ವಾಗತಿಸಿ ಪರಿಚಯ ಮಾಡಿಕೊಟ್ಟರು.

ಬ್ಯಾಂಕಿನ ಉಪಾಧ್ಯಕ್ಷೆ ಸುವರ್ಣಾ ಶಹಾಪುರ್ಕರ ಮತ್ತು ಇತರ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Back to top button