ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಂಡವಾಡ ಗ್ರಾಮದ ಹತ್ತಿರ ಹೊಲಗಳಿಗೆ ಹೋಗುವ ಕಾಲುದಾರಿ ಪಕ್ಕ ಇರುವ ದನಗಳ ಶೆಡ್‌ನ ಮುಂದೆ ಖುಲ್ಲಾ ಜಾಗದಲ್ಲಿ ಅಂದರ್ -ಬಾಹರ ಜುಗಾರ ಆಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಸುರೇಶ ಈರಪ್ಪಾ ಲಮಾಣ (೩೭) (ಸಾ|| ಸಂಗಮ ನಗರ ಕಂಗ್ರಾಳಿ ಬಿಕೆ), ಮಲ್ಲೇಶ ಸತ್ತೆಪ್ಪಾ ಬುಡರಿ (೩೫), ಯಲ್ಲಪ್ಪಾ ಕಣ್ಣಪ್ಪಾ ಬಡಕನ್ನವರ (೩೦) (ಸಾ: ಯಲ್ಲಮ್ಮಾ ಗಲ್ಲಿ, ಹುಣಶ್ಯಾನಟ್ಟಿ), ಸಂತೋಷ ಚಂದ್ರಕಾಂತ ಪಾಟೀಲ (೩೧) (ಸಾ: ಮ ನಂ.೩೩/೬, ಬಿ ಕೆ ಕಂಗ್ರಾಳಿ), ಗಂಗಾರಾಮ ಸಿದ್ದಪ್ಪಾ ಬಡಕನ್ನವರ (೩೮) (ಸಾ: ಮುತ್ಯಾನಟ್ಟಿ) ಬಂಧಿತರು. ಇವರಿಂದ 24,700 ರೂ. ವಶಪಡಿಸಿಕೊಳ್ಳಲಾಗಿದೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಡಾ. ಕೆ ತ್ಯಾಗರಾಜನ್, ಪೊಲೀಸ್ ಆಯುಕ್ತರು, ಡಾ. ವಿಕ್ರಮ ಅಮಟೆ ಡಿಸಿಪಿ (ಕಾ&ಸು), ಚಂದ್ರಶೇಖರ ನೀಲಗಾರ ಡಿಸಿಪಿ (ಅ&ಸಂ) ಮತ್ತು ಎನ್. ವ್ಹಿ. ಭರಮನಿ, ಎಸಿಪಿ ಅಪರಾಧ ಇವರ ಮಾರ್ಗದರ್ಶನದಲ್ಲಿ ಬೆಳಗಾವಿ ನಗರ ಸಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ ಸಂಜೀವ ಎಂ ಕಾಂಬಳೆ ಹಾಗೂ ಬಿ ಆರ್ ಮುತ್ನಾಳ, ಬಿ ಎನ್ ಬಳಬನ್ನವರ, ಎಸ್. ಸಿ. ಕೊರೆ, ಎಸ್ ಎಸ್ ಪಾಟೀಲ, ಸಿ ಜೆ ಚಿನ್ನಪ್ಪಗೋಳ, ಎಮ್ ಎಮ್ ವಡೇಯರ, ಎ ಕೆ ಕಾಂಬಳೆ, ಅಶೋಕ ಭೋಸಲೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ