Kannada NewsKarnataka News

ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರ ವಾರ್ಷಿಕ ಸಭೆ

ಪ್ರಗತಿವಾಹಿನಿ ಸುದ್ದಿ, ಅಥಣಿ– ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನ  ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರ ವಾರ್ಷಿಕ ಸಭೆಯನ್ನು ಅಥಣಿಯ ಗುಜರಾತ್ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು  ವೆಂಕಟೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅಥಣಿ ಅಧ್ಯಕ್ಷರಾದ  ಅನಂತ ಕುಲಕರ್ಣಿ ಇವರು ವಹಿಸಿದ್ದರು.
ಉದ್ಘಾಟನೆಯನ್ನು  ಸಹಕಾರ ಅಭಿವೃದ್ಧಿ ಅಧಿಕಾರಿ ವಿನಾಯಕ ಲಕ್ಸಾಣೆ ಇವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಜಾಗ್ರತಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಹಾರೂಗೇರಿಯ
ಅಮರ ದುರ್ಗನ್ನವರ್ ,  ಕುಮಾರಸ್ವಾಮಿ ಸೌಹಾರ್ದ ಸಹಕಾರಿ ಅಥಣಿ ಮಲ್ಲಿಕಾರ್ಜುನ ಬುಟಾಳೆ, ಶಿವಾನಂದ ದಿವಾನಮಳ, ಸನ್ನದು ಲೆಕ್ಕ ಪರಿಶೋಧಕರು ಶಿರಸಿಯ ಸುಬ್ರಮಣ್ಯ ಹೆಗಡೆ,   ಪ್ರಾಂತೀಯ  ವ್ಯವಸ್ಥಾಪಕರು ಕ.ರಾ.ಸೌ. ಸಂ.ಸ. ನಿ ಬೆಳಗಾವಿಯ ಶ್ರೀಕಾಂತ್ ಬರುವೆ ರವರು ಆಗಮಿಸಿದ್ದರು.
ಈ ಸಭೆಯಲ್ಲಿ 72 ಸೌಹಾರ್ದ ಸಹಕಾರಿಗಳಿಂದ  ಪ್ರತಿನಿಧಿಗಳು ಭಾಗವಹಿಸಿದ್ದರು. ಆದಾಯ ತೆರಿಗೆ, ಟಿ. ಡಿ .ಎಸ್. ಮತ್ತು ಜಿ.ಎಸ್.ಟಿ, ಅನಿಯಿಂತ್ರಿತ ಠೇವಣಿ ಯೋಜನೆ ನಿಷೇಧ ಅಧಿನಿಯಮ 2019 ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.  ಕನಾ೯ಟಕ ರಾಜ್ಯ  ಸಹಕಾರಿ ಸೌಹಾರ್ದ ಸಂಯುಕ್ತ ನಿಗಮ ಚಿಕ್ಕೋಡಿ ವಿಭಾಗದ ಅಭಿವೃದ್ಧಿ ಅಧಿಕಾರಿ ಜವಾಹರ್ ಮುಗ್ಗನ್ನವರ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button