Kannada NewsKarnataka NewsLatest

ಚಿನ್ನ ಕಳುವು ಪ್ರಕರಣ: ಆರೋಪಿ ಕಿರಣ್ ವಿರುದ್ಧ ಸಿಐಡಿಯಿಂದ ಮತ್ತೊಂದು ದೂರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 4.9ಕಿಲೋ ಚಿನ್ನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ.

ಸೆಕ್ಷನ್ 468, 565, 419 ಮತ್ತು 471ರ ಪ್ರಕಾರ ದೂರು ದಾಖಲಿಸಲಾಗಿದೆ.

ಜನೆವರಿ 10ರಂದು ಆರೋಪಿ ಕಿರಣ ವೀರನಗೌಡ ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿ ನಕಲಿ ಗುರುತಿನ ಪತ್ರ ತೋರಿಸಿ ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಟೋಲ್ ಫೀ ಪಾವತಿಸದೆ ಹೋಗಿದ್ದಾರೆ. ಇದರಿಂದ ಟೋಲ್ ನಾಕಾಕ್ಕೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.

ಸಿಐಡಿ ಡಿಎಸ್ಪಿ ರಾಮಚಂದ್ರ ಬಿ ಇಂದು ದೂರು ದಾಖಲಿಸಿದ್ದಾರೆ. ಕಿರಣ ಮತ್ತು ಇತರರು ಆರೋಪಿಗಳು ಎಂದು ದಾಖಲಿಸಲಾಗಿದ್ದು, ಹುಂಡೈ ಕ್ರೆಟಾ ಕಾರನ್ನು ಬಳಸಲಾಗಿತ್ತು ಎಂದು ತಿಳಿಸಲಾಗಿದೆ.

ಇಲ್ಲಿದೆ ಸಂಬಂಧಿಸಿದ ಸುದ್ದಿ –

ಚಿನ್ನ ನುಂಗಿದ ಪ್ರಕರಣ: ಏನಿದರ ರಹಸ್ಯ?

Related Articles

Back to top button