Cancer Hospital 2
Beereshwara 36
LaxmiTai 5

ಭಾರತ- ಪಾಕಿಸ್ತಾನ ಮಧ್ಯೆ ಮತ್ತೊಂದು ಪ್ರೇಮ ವಿವಾಹದ ಸಂಬಂಧ

Anvekar 3

ಪ್ರಗತಿವಾಹಿನಿ ಸುದ್ದಿ, ಜೋಧಪುರ: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ- ಭಾರತ ನಡುವಣ ‘ಪ್ರೇಮ ಸಂಬಂಧ’ಗಳು ಸರಣಿಯಾಗಿ ನಡೆಯುತ್ತಿವೆ. ಪಾಕಿಸ್ತಾನದಿಂದ ಭಾರತೀಯ ಪ್ರಿಯಕರನಿಗಾಗಿ ಓಡಿ ಬಂದ ಸೀಮಾ ಹೈದರ್, ಭಾರತದಿಂದ ಪಾಕಿಸ್ತಾನಕ್ಕೆ ಪಲಾಯನಗೈದ ಅಂಜು ಸುದ್ದಿಗಳು ಬಿಸಿಬಿಸಿಯಾಗಿರುವಾಗಲೇ ರಾಜಸ್ಥಾನದ ಜೋಧಪುರದ ವ್ಯಕ್ತಿಯೊಬ್ಬರು ಪಾಕಿಸ್ತಾನದ ಯುವತಿ ಜತೆ ವರ್ಚುವಲ್ ವಿವಾಹದ ಮೂಲಕ ಸುದ್ದಿಯಾಗಿದ್ದಾರೆ.

ಈ ಜೋಡಿಯಲ್ಲಿ ಯುವಕ ಪಾಕಿಸ್ತಾನಕ್ಕೆ ಹೋಗಿಲ್ಲ, ಯುವತಿ ಭಾರತಕ್ಕೆ ಬಂದಿಲ್ಲ. ಎಲ್ಲವೂ ಆನ್ ಲೈನ್ ನಲ್ಲೇ ನಡೆದಿದೆ. ಕರಾಚಿಯ ನಿವಾಸಿ ಅಮೀನಾ, ಜೋಧ್‌ಪುರದ ನಿವಾಸಿ ಅರ್ಬಾಜ್ ಅವರನ್ನು ಆನ್​ಲೈನ್​ ಮೂಲಕ ವಿವಾಹವಾಗಿದ್ದಾರೆ. ಕಾರಣವಿಷ್ಟೇ. ಅಮೀನಾಗೆ ಭಾರತಕ್ಕೆ ಬರಲು ವೀಸಾ ದೊರೆತಿಲ್ಲ. ಹೀಗಾಗಿ ಅರ್ಬಾಜ್ ಮತ್ತು ಅಮೀನಾ ಆನ್​ಲೈನ್​ನಲ್ಲಿಯೇ ನಿಕಾಹ ಮಾಡಿಕೊಂಡಿದ್ದಾರೆ.

Emergency Service

ಡಿಟಿಪಿ ಆಪರೇಟರ್ ಆಗಿರುವ ಅರ್ಬಾಜ್ ಕುಟುಂಬ ಪಾಕಿಸ್ತಾನದಲ್ಲಿರುವ ಅಮಿನಾ ಕುಟುಂಬದೊಂದಿಗೆ ಈ ಮೊದಲೇ ನಂಟು ಹೊಂದಿತ್ತು. ಅರ್ಬಾಜ್ ಹಾಗೂ ಅಮೀನಾ ಪ್ರೇಮ ಪ್ರಕರಣದ ವಿಷಯ ತಿಳಿಯುತ್ತಲೇ ಅಮೀನಾ ಮನೆಯವರು ಮದುವೆ ಪ್ರಸ್ತಾಪ ಮಾಡಿದ್ದರಿಂದ ಅದಕ್ಕೆ ಖುಷಿಯಿಂದಲೇ ಒಪ್ಪಿಕೊಂಡಿದ್ದೇವೆ ಎಂದು ಅರ್ಬಾಜ್ ತಂದೆ ಮೊಹಮ್ಮದ್ ಅಫ್ಜಲ್ ತಿಳಿಸಿದ್ದಾರೆ.

ಜೋಧ್‌ಪುರದ ಓಸ್ವಾಲ್ ಸಮಾಜ ಭವನದಲ್ಲಿ ಈ ಆನ್​ಲೈನ್​ ವಿವಾಹ ನಡೆಯಿತು. ಪಾಕಿಸ್ತಾನದಲ್ಲಿ ಮದುವೆಯಾದರೆ ಭಾರತಕ್ಕೆ ಬಂದಾಗ ಮತ್ತೆ ಮದುವೆಯಾಗಬೇಕಾಗುತ್ತದೆ. ಅದಕ್ಕಾಗೇ ಈ ವಿಧಾನ ಬಳಸಲಾಗಿದೆ ಎಂದಿರುವ ಅರ್ಬಾಜ್, ಅಮೀನಾಳನ್ನು ಭಾರತಕ್ಕೆ ತರಲು ಮತ್ತೊಮ್ಮೆ ವಿಸಾಕ್ಕೆ ಅರ್ಜಿ ಸಲ್ಲಿಸುವುದಾಗಿಯೂ ಹೇಳಿಕೊಂಡಿದ್ದಾರೆ.

Bottom Add3
Bottom Ad 2