
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಇಂದಿನಿಂದ 26ನೇ ರಾಷ್ಟ್ರೀಯ ಯುವಜನೋತ್ಸವ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಧಾನಿ ಮೋದಿಯವರು ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನವೊಂದು ಪತ್ತೆಯಾಗಿದ್ದು, ಪೊಲೀಸರು ವಾಹನ ತೆರವುಗೊಳಿಸಿದ್ದಾರೆ. ಹೊಸೂರು ಕ್ರಾಸ್ ನಲ್ಲಿ ರಸ್ತೆ ಮಧ್ಯೆ ಮಹಾರಾಷ್ಟ್ರದ ನೋಂದಣಿಯ ಕಾರೊಂದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದಲೂ ಈ ಕಾರು ಇಲ್ಲಿಯೇ ನಿಂತಿದೆ ಎಂದು ತಿಳಿದುಬಂದಿದೆ.
ವೋಲ್ಕ್ಸ್ ವ್ಯಾಗನ್ ಕಂಪನಿಯ ಕಾರು ಇದಾಗಿದ್ದು MH 10, CA 6984 ಮಹಾರಾಷ್ಟ್ರ ರಾಜ್ಯದ ನೋಂದಣಿಯುಳ್ಳ ಕಾರಾಗಿದೆ ಕಾರು ನೋಡಿ ಅನುಮಾನಗೊಂಡ ಪೊಲೀಸರು ಕಾರನ್ನು ಬೇರೆಡೆ ಶಿಫ್ಟ್ ಮಾಡಿದ್ದಾರೆ.
*ಮತ್ತೋರ್ವ ವೈದ್ಯ ವಿದ್ಯಾರ್ಥಿ ಅರೆಸ್ಟ್*
https://pragati.taskdun.com/drugs-caseganja-casemangalore-medical-collegekmcmedical-student-arrested/