Kannada NewsKarnataka News
ಅಪಘಾತಕ್ಕೆ ಮತ್ತೋರ್ವ ಯುವಕ ಬಲಿ

ಪ್ರಗತಿವಾಹಿನಿ ಸುದ್ದಿ, ಕಬ್ಬೂರು – ನಿಪ್ಪಾಣಿ -ಮುಧೋಳ ರಾಜ್ಯ ಹೆದ್ದಾರಿ 18ರ ಕಬ್ಬೂರು ಹೊರವಲಯದಲ್ಲಿ ಶುಕ್ರವಾರ ಮಧ್ಯ ರಾತ್ರಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಯುವಕ ಬಲಿಯಾಗಿದ್ದಾನೆ.
ಕಬ್ಬೂರಿನಿಂದ ಚಿಕ್ಕೋಡಿ ರೋಡ್ ಕಡೆಗೆ ವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಕಲ್ಲಿಗೆ ಗುದ್ದಿದ್ದಾನೆ. ಬೈಕ್ ಸವಾರ 20 ವರ್ಷದ ಚಿಕ್ಕೋಡಿ ರೋಡ್ ನಿವಾಸಿ ನಿತೀಷ್ ರಾಜು ಪಾಟೀಲ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಚಿಕ್ಕೋಡಿ ಪಿಎಸ್ಐ ರಾಜೇಶ ಬಗಲಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




