
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಮಗೆ ಅಂಬೇಡ್ಕರ್ ಬಿಟ್ಟರೆ ಯಾರು ಶ್ರೇಷ್ಠರಲ್ಲ. ಅವರು ಸಿಕ್ಕಿದ್ದೆ ಶ್ರೇಷ್ಠ. ಬಸವಣ, ಮಹಾತ್ಮೆ ಪುಲೆ, ಸಾವಿತ್ರಿ ಬಾಯಿ ಪುಲೆ, ನಾರಾಯಣಗುರು, ಪೇರಿಯಾರ ನಾರಾಯಣಸ್ವಾಮಿ ಕೂಡ ಶ್ರೇಷ್ಠರಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ ಜಯಂತಿಯಲ್ಲಿ ಬಾಬಾಸಾಹೇಬರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಬಾಬಾಸಾಹೇಬರು ಕೊಟ್ಟಂತಹ ಸಂವಿಧಾನದಿಂದ ನಮಗೆ ನೌಕರಿ ಬಂದಿವೆ,ರಾಜಕಾರಣಿಗಳಾಗಿದ್ದೇವೆ, ನಮಗೆ ಮಾತಾಡುವ ಸ್ವಾತಂತ್ರ್ಯವನ್ನು ಅಂಬೇಡ್ಕರ್ ಅವರು ಕೊಟ್ಟಿದ್ದನ್ನು ಯಾವತ್ತು ಮರೆಯಬಾರದೆಂದು ಹೇಳಿದರು.
ಬರುವಂತ ಮಕ್ಕಳು ಶಿಕ್ಷಣ ಜೊತೆ ಅಂಬೇಡ್ಕರ್ ಅವರನ್ನು ಅರ್ಪಣೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಬಹಳ ಕಷ್ಟ ದಿನಗಳನ್ನು ನೋಡಬೇಕಾಗುತ್ತದೆ. ಅಂಬೇಡ್ಕರ್ ಅವರ ವಿಚಾರಗಳನ್ನು ಮನೆಮನೆಗೂ ತಿಳಿಸಬೇಕೆಂದು ಹೋರಾಟ ಮಾಡುತಿದ್ದೇವೆ. ಅದರ ಪ್ರತಿಫಲ ರಾಜ್ಯದ ಮೂಲೆ ಮೂಲೆಯಲ್ಲಿ ಅಂಬೇಡ್ಕರ್ ಬಸವಣ್ಣ, ಬುದ್ಧನ ವಿಚಾರಗಳನ್ನು ಮಾನವ ಬಂದುತ್ವ ವೇದಿಕೆ ಮುಖಾಂತರ ತಿಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ದಲಿತ ಮುಖಂಡರಾದ ಶೆಟ್ಟೆಪ್ಪಾ ಮೇಸ್ತ್ರಿ, ರಫೀಕ ಭೋಕರೆ, ಕಮಲಾ ಕರೆಮನ್ನವರ, ರಮೇಶ ಮೇಸ್ತ್ರಿ, ರಮೇಶ ಮಾದರ, ಯಮನೇಜರ ಕರಬನ್ನವರ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.