ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಕಂದಾಯ ಇಲಾಖೆಯಲ್ಲಿ ಕಳೆದ ೪೫ ವರ್ಷಗಳಿಂದ ಸೇವೆ ಸಲ್ಲಿಸುತಿರುವ ರಾಜ್ಯದ ಸು.೧೦೪೫೦ ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣ ಸಿ, ಸೇವಾ ಭದ್ರತೆಗಾಗಿ ಒದಗಿಸುವುದಾಗಿ ಚಳಿಗಾಲ ಅಧಿವೇಶನದಲ್ಲಿ ನಡೆಸಿದ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ, ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರು ೧೫ ದಿನಗಳಲ್ಲಿ ಮುಖ್ಯಂತ್ರಿಗಳ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎನ್.ದೇವರಾಜು, ರಾಜ್ಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟಗಾರ ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ, ಕಾನೂನು ಸಲಹೆಗಾರ ಪಾವಗಡ ಶ್ರೀರಾಮ, ರಾಜ್ಯ ಸಂಘದ ಪದಾಧಿಕಾರಿಗಳು, ಕಾನೂನು ಹೋರಾಟ ಸಮಿತಿ ಸದಸ್ಯರು, ರಾಜ್ಯ ಸಂಘದ ವಿವಿಧ ಪದಾಧಿಕಾರಿಗಳು ಜತೆಗೂಡಿ ಸಚಿವರ ಭರವಸೆ ಮೇಲಿಂದ ಪ್ರತಿಭಟನೆ ಕೈ ಬಿಡಲಾಗಿತ್ತು. ನಂತರ ಕಂದಾಯ ಸಚಿವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಅಭಿನಂದಿಸಿಲು ಹೋದಾಗ ಸಚಿವರು, ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು, ಸದ್ಯದಲ್ಲಿಯೆ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದು, ಬೇಡಿಕೆ ಆದಷ್ಟು ಬೇಗನೆ ಈಡೇರಿಸಲು ಸಂಗೊಳ್ಳಿ ಉತ್ಸವದಲ್ಲಿ ರಾಜ್ಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟಗಾರ ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೋಟೊ ಶಿರ್ಷಿಕೆ:
೧೭ ಬೈಲಹೊಂಗಲ:೧
ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ ನೇತೃತ್ವದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಜಿಲ್ಲಾ ಸಂಘದ ಪದಾಧಿಕಾರಿಗಳು ಬೇಡಿಕೆ ಆದಷ್ಟು ಬೇಗನೆ ಈಡೇರಿಸಲು ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ