ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ – ಅಖಿಲ ಕರ್ನಾಟಕ ಗಾನಯೋಗಿ ಸಂಗಿತ ಪರಿಷತ್ನ
ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಮ್ ಸಿದ್ದರಾಮಯ್ಯ ನೇಮಕವಾಗಿದ್ದಾರೆ.
ಅಖಿಲ ಕರ್ನಾಟಕ ಗಾನಯೋಗಿ ಸಂಗಿತ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ವೇ. ಚನ್ನವೀರಶ್ರೀ ಸ್ವಾಮಿ ಹಿರೇಮಠ (ಕಡಣಿ) ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅಧಿಕಾರದ ಅವಧಿಯು ಎರಡು ವರ್ಷ ಅಥವಾ ರಾಜ್ಯ ಅಧ್ಯಕ್ಷರು ಒಪ್ಪುವವರೆಗೆ ಇರುತ್ತದೆ.
ಸಂಗೀತ, ಸಾಹಿತ್ಯ, ಅಧ್ಯಾತ್ಮ, ಯೋಗ ಮತ್ತು ಭಾರತಿಯ ಕಲಾ ಪರಂಪರೆಯ ಸೇವೆಗಾಗಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಸ್ಥಾಪಿಸಿಕೊಟ್ಟ ಈ ಸಂಸ್ಥೆಯ ಸೇವೆ ಮಾಡುವ ಅವಕಾಶ ಒದಗಿ ಬಂದಿರುವುದು ತಮ್ಮ ಸುಕೃತವೆಂದು ಭಾವಿಸಿ, ಗುರು ಕುಮಾರ ಪಂಚಾಕ್ಷರಿ ಪುಟ್ಟರಾಜರಿಗೆ ತಮ್ಮ ಸೇವೆ ಸಲ್ಲಿಲಿ ಎಂದು ಹಾರೈಸುತ್ತೇವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪೂಜ್ಯರ ಅಭಿಮಾನಿ ಭಕ್ತರನ್ನು ಈ ಪರಿಷತ್ನ ಮುಖ್ಯ ವಾಹಿನಿಗೆ ತಂದು ತಾಲೂಕಿನಾದ್ಯಂತ ಈ ಪರಿಷತ್ ಕಟ್ಟಿ ಬೆಳಿಸಲು, ಅಭಿಮಾನಿ ಭಕ್ತರ ಸದಸ್ಯತ್ವ ಅಭಿಯಾನ ಆರಂಭಿಸಲು ಮತ್ತು ಪೂರ್ಣ ಪ್ರಮಾಣದ ಕಾರ್ಯಕಾರಿ ಮಂಡಳಿ ರಚಿಸಿಕೊಂಡು ವರದಿ ಮಾಡಲು ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ