Kannada NewsKarnataka NewsLatestPolitics

*ಕರ್ನಾಟಕದಲ್ಲಿ 35 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ*

ಕರ್ನಾಟಕದಲ್ಲಿ 35 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ

ಪ್ರಗತಿವಾಹಿನಿ ಸುದ್ದಿ/
*ನವದೆಹಲಿ/ಬೆಂಗಳೂರು:* ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಹುನಿರೀಕ್ಷಿತ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರ ನೇಮಕ ಅಂತಿಮವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು *ಸೆಪ್ಟೆಂಬರ್ 09, 2026* ರಂದು 35 ಜಿಲ್ಲೆಗಳ ಅಧ್ಯಕ್ಷರ ಪಟ್ಟಿಯನ್ನು ಪ್ರಕಟಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.

Home add -Advt

*ಸಂಘಟನ್ ಸೃಜನ್ ಅಭಿಯಾನದಡಿ* ನೇಮಕ ಮಾಡಲಾಗಿದ್ದು, ಪ್ರತಿ ಜಿಲ್ಲೆಗೆ ನೇಮಕವಾಗಿದ್ದ AICC ವೀಕ್ಷಕರು ಜಿಲ್ಲಾ ಮಟ್ಟದಲ್ಲಿ ವಿವರವಾದ ಪರಿಶೀಲನೆ ನಡೆಸಿ, ಪಕ್ಷದ ಪದಾಧಿಕಾರಿಗಳು ಮತ್ತು ಇತರರೊಂದಿಗೆ ಚರ್ಚಿಸಿ ವರದಿ ಸಲ್ಲಿಸಿದ್ದರು. ಆ ವರದಿ ಆಧರಿಸಿ ಹಿರಿಯ ನಾಯಕರೊಂದಿಗೆ ಚರ್ಚಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

*ಪ್ರಮುಖ ಜಿಲ್ಲೆಗಳ ಪಟ್ಟಿ ಹೀಗಿದೆ:*

– *ಬಾಗಲಕೋಟೆ:* ಶ್ರೀ ದಯಾನಂದ್ ಎಸ್ ಪಾಟೀಲ್

– *ಬೆಂಗಳೂರು ಉತ್ತರ:* ಶ್ರೀ ಅಬ್ದುಲ್ ವಾಜಿದ್

– *ಬೆಂಗಳೂರು ದಕ್ಷಿಣ:* ಶ್ರೀ ಒ ಮಂಜುನಾಥ್

– *ಬೆಂಗಳೂರು ಪೂರ್ವ:* ಶ್ರೀ ಡಿ.ಕೆ. ಮೋಹನ್ ಬಾಬು

– *ಬೆಂಗಳೂರು ಪಶ್ಚಿಮ:* ಶ್ರೀ ಹನುಮಂತರಾಯಪ್ಪ

– *ಬೆಂಗಳೂರು ಕೇಂದ್ರ:* ಶ್ರೀ ಜೆ ಸರವಣನ್

– *ಬೆಂಗಳೂರು ಗ್ರಾಮಾಂತರ:* ಶ್ರೀ ಸಿ. ಪ್ರಸನ್ನ ಕುಮಾರ್

– *ಚಿಕ್ಕೋಡಿ:* ಶ್ರೀ ಲಕ್ಷ್ಮಣರಾವ್ ಚಿಂಗಲೆ

– *ಬೆಳಗಾವಿ ನಗರ:* ಶ್ರೀ ಸಲಾವುದ್ದೀನ್ ಸಿ ಸಲೀಂ ಬಿ. ಖತೀಬ್ (ಶ್ರೀ ರಾಜಾ ಸಲೀಂ)

– *ಬೆಳಗಾವಿ ಗ್ರಾಮಾಂತರ:* ಶ್ರೀ ಬಸವರಾಜ ಶೇಗಾವಿ

– *ಬಳ್ಳಾರಿ ನಗರ:* ಶ್ರೀ ಆಲಂ ಪ್ರಶಾಂತ್

– *ಬಳ್ಳಾರಿ ಗ್ರಾಮಾಂತರ:* ಶ್ರೀ ಕೆ ಮಲ್ಲಿಕಾರ್ಜುನ್

– *ಬೀದರ್:* ಶ್ರೀ ಅಬ್ದುಲ್ ಮನ್ನಾನ್ ಸೇಟ್

– *ಚಾಮರಾಜನಗರ:* ಶ್ರೀ ಜೆ ಯೋಗೇಶ್

– *ಚಿಕ್ಕಮಗಳೂರು:* ಶ್ರೀ ಹೆಚ್.ಪಿ. ಮಂಜೇಗೌಡ

– *ದಕ್ಷಿಣ ಕನ್ನಡ:* ಶ್ರೀ ಪದ್ಮರಾಜ್ ಆರ್ ಪೂಜಾರಿ

– *ದಾವಣಗೆರೆ:* ಶ್ರೀ ಇಬ್ರಾಹಿಂ ಖಲೀಲುಲ್ಲಾ

– *ಧಾರವಾಡ ಗ್ರಾಮಾಂತರ:* ಶ್ರೀ ಚಂದ್ರಶೇಖರ್ ಜುತ್ತಲ್

– *ಗದಗ:* ಶ್ರೀ ವಸಣ್ಣ ಕುರಡಗಿ

– *ಕಲಬುರಗಿ:* ಡಾ. ಕಿರಣ್ ಎ ದೇಶಮುಖ್

– *ಹಾಸನ:* ಶ್ರೀ ಶಶಿಧರ್ ಜಿ ಬಿ

– *ಹಾವೇರಿ:* ಶ್ರೀ ಸಂಜೀಬ್ ಕುಮಾರ್ ನೀರಲಗಿ

– *ಹುಬ್ಬಳ್ಳಿ-ಧಾರವಾಡ ನಗರ:* ಶ್ರೀ ಸದಾನಂದ್ ವಿ ದಂಗನವರ್

– *ಕೊಡಗು:* ಶ್ರೀ ಧರ್ಮಜ ಉತ್ತಪ್ಪ

– *ಕೋಲಾರ:* ಶ್ರೀ ಎನ್ ನಾರಾಯಣಸ್ವಾಮಿ

– *ಕೊಪ್ಪಳ:* ಶ್ರೀ ಎಂ. ಮಲ್ಲಿಕಾರ್ಜುನ ನಾಗಪ್ಪ

– *ಮಂಡ್ಯ:* ಶ್ರೀ ಕುಮಾರ್ ಕೊಪ್ಪ

– *ಮೈಸೂರು ನಗರ:* ಶ್ರೀ ಆರ್ ಮೂರ್ತಿ

– *ಮೈಸೂರು ಗ್ರಾಮಾಂತರ:* ಶ್ರೀ ಬೀರಿ ಹುಂಡಿ ಬಸವಣ್ಣ

– *ರಾಯಚೂರು:* ಶ್ರೀ ಕೆ ಶಾಂತಪ್ಪ

– *ರಾಮನಗರ:* ಶ್ರೀ ಸಿ.ಎನ್. ವೆಂಕಟೇಶ್

– *ಶಿವಮೊಗ್ಗ:* ಶ್ರೀ ಹೆಚ್ ಸಿ ಯೋಗೇಶ್

– *ಉಡುಪಿ:* ಶ್ರೀ ಕಿಶನ್ ಕುಮಾರ್ ಹೆಗ್ಡೆ

– *ಉತ್ತರ ಕನ್ನಡ:* ಶ್ರೀ ಗಜಾನನ ತಿಮ್ಮ ನಾಯ್ಕ್

– *ಯಾದಗಿರಿ:* ಶ್ರೀ ಬಸಾ ರೆಡ್ಡಿ ಎಂ ಪಾಟೀಲ್

ಈ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆ ಹೆಸರು ಕಾಣಿಸದೇ ಇರುವುದು ಗಮನಾರ್ಹ. ಒಟ್ಟು 35 ಜಿಲ್ಲೆಗಳ ಪಟ್ಟಿ ಮಾತ್ರ ಪ್ರಕಟವಾಗಿದೆ.


Related Articles

Back to top button