Kannada NewsLatestNational

*ಕುಸಿದು ಬಿದ್ದ ಕಮಾನು: 9 ಕಾರ್ಮಿಕರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ : ತಮಿಳುನಾಡಿನ ಎನ್ನೋರ್‌ನ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಸ್ಥಳದಲ್ಲಿ ಭೀಕರ ಅವಘಡ ಸಂಭವಿಸಿದ್ದು,  9 ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗಳಾಗಿವೆ. 

ಎನ್ನೋರ್‌ನ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಸ್ಥಳದಲ್ಲಿ 30 ಅಡಿ ಎತ್ತರದಿಂದ ನಿರ್ಮಾಣವಾಗುತ್ತಿದ್ದ ಕಮಾನು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಹಲವು ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ. 

ಈ ಅವಘಡ ನಡೆದಲ್ಲಿ ಕಾರ್ಮಿಕ ಸಿಲುಕಿದ್ದು ಹಲವು ಕಾರ್ಮಿಕರು  ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

Related Articles

Back to top button