*`ಆ ಸಮಯದಲ್ಲಿ’ ಬಾಗಿಲು ಮುಚ್ಕೊಳ್ಳೋದಿಲ್ಲ : ದಂಪತಿ ವಿರುದ್ಧ ಪಕ್ಕದ ಮನೆಯಾಕೆ ದೂರು!*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಾಗಿಲು ಮುಚ್ಚಿಕೊಳ್ಳದೆ ಲೈಂಗಿಕ ಕ್ರಿಯೆ ನಡೆಸುತ್ತಾರೆ, ಈ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಳ್ಳುತ್ತಿರುತ್ತಾರೆ. ಬಾಗಿಲು ಮುಚ್ಕೊಳ್ಳಿ ಎಂದು ಹೇಳಲು ಹೋದರೆ ನನ್ನ ಮೇಲೇ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಪಕ್ಕದ ಮನೆಯವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ.
ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಪಕ್ಕದ ಮನೆಯ ಬಾಡಿಗೆದಾರ ದಂಪತಿ ಹಾಗೂ ಬಾಡಿಗೆ ಕೊಟ್ಟ ಓನರ್ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಬೆಡ್ ರೂಂ ಬಾಗಿಲು ತೆರೆದು ಲೈಂಗಿಕ ಕ್ರಿಯೆ ಮಾಡ್ತಾರೆ ಎಂದು 44 ವಯಸ್ಸಿನ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಪಕ್ಕದ ಮನೆ ಎರಡನೇ ಮಹಡಿಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿ ತಮ್ಮ ಬೆಡ್ ರೂಂ ಬಾಗಿಲು ಹಾಕಿಕೊಳ್ಳದೇ ತಮ್ಮ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆಯನ್ನು ಮಾಡುತ್ತಾರೆ. ನಮ್ಮ ಮನೆ ಬಾಗಿಲ ಬಳಿ ಅವರ ಮನೆ ಬೆಡ್ ರೂಂ ಇದೆ. ತಮ್ಮ ಬೆಡ್ ರೂಮ್ ಕಿಟಕಿ ತೆರೆದು ತಮ್ಮ ಹೆಂಡತಿ ಜೊತೆ ಲೈಂಗಿಕ ಕ್ರಿಯೆ ಮಾಡುತ್ತಾರೆ. ಈ ಮೂಲಕ ಬಹಳ ವಿಕೃತ ಮತ್ತು ಅಸಹ್ಯ ಮನಸ್ಥಿತಿಯಿಂದ ನಡೆದುಕೊಳ್ಳುತ್ತಿರುತ್ತಾರೆ ಎಂದು ಮಹಿಳೆ ದೂರಿದ್ದಾರೆ.
ಪಕ್ಕದ ಮನೆ ಬೆಡ್ ರೂಂನಲ್ಲಿ ಗಂಡ ಹೆಂಡತಿಯ ಸರಸ ಸಲ್ಲಾಪ ನೋಡಿ ಮುಜುಗರಕ್ಕೆ ಒಳಗಾಗಿದ್ದೇವೆ. ನಾನು ದಯವಿಟ್ಟು ತಮ್ಮ ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದೆ. ಇದಕ್ಕೆ ಆತ ಬಹಳ ಅವಾಚ್ಯ ಶಬ್ದಗಳಿಂದ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಬೈದು ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಬೈಯ್ದಿದ್ದಲ್ಲದೇ ನನ್ನ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅವರ ಮನೆ ಮಾಲೀಕ ಹಾಗೂ ಅವರ ಮಗ ಜೊತೆಗೂಡಿ ನಮ್ಮ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕೆಲವು ಯುವಕರನ್ನು ಕರೆಸಿ, ಎಲ್ಲರೂ ತುಂಬಾ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ನಮಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಬೇಕು. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ