NationalPolitics

*12 ವರ್ಷಗಳ ಬಳಿಕ ಅಸಾರಾಂ ಬಾಪುಗೆ ಜಾಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ : 2013ರ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೋದಪುರ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

2013ರಲ್ಲಿ ಜೋಧಪುರ ಆಶ್ರಮದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ತಪ್ಪಿತಸ್ಥ ಎನ್ನುವುದು ಸಾಬೀತಾಗಿತ್ತು. 86 ವರ್ಷದ ಅಸಾರಾಂ ಬಾಪುಗೆ ಜೋಧಪುರ ವಿಚಾರಣಾ ನ್ಯಾಯಾಲಯವು ಐಪಿಸಿ ಸೆಕ್ಷನ್ 376, ಪೋಕ್ಸೂ ಕಾಯ್ದೆ ಮತ್ತು ಬಾಲಾರೋಪ ನ್ಯಾಯ ಕಾಯ್ದೆ ಅಡಿ ಶಿಕ್ಷೆ ವಿಧಿಸಿತ್ತು. 2013ರ ಆಗಸ್ಟ್‌ನಲ್ಲಿ ಅಸಾರಾಂನನ್ನು ಬಂಧಿಸಿ, ಸೆಪ್ಟೆಂಬರ್‌ನಲ್ಲಿ ಜೋಧಪುರಕ್ಕೆ ಕರೆತರಲಾಗಿತ್ತು

Home add -Advt

ಈಗ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ನ್ಯಾಯ ಪೀಠ ಈ ಜಾಮೀನು ನೀಡಿದ್ದು ಜೈಲಿನಿಂದ ಬಿಡುಗಡೆಯಾದ ನಂತರ ಅವರ ಅನುಯಾಯಿಗಳನ್ನು ಭೇಟಿ ಮಾಡದಂತೆ ನಿರ್ದೇಶಿಸಿದೆ.

86 ವರ್ಷ ವಯಸ್ಸಿನ ಅಸಾರಾಂ ಹೃದಯ ಸಂಬಂಧಿ ಕಾಯಿಲೆಯ ಜೊತೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ.

Related Articles

Back to top button